ಹೊಲೆಗೇರಿ ಹೋಲಿಕೆ: ಕ್ಷಮೆ ಕೇಳಿದ ನಟ ಉಪೇಂದ್ರ

ಊರು ಅಂದ್ರೆ ಹೊಲಗೇರಿ ಇರುತ್ತದೆ ಎಂದು ನೇರ ಸಂಭಾಷಣೆಯ ವೇಳೆ ತಾವಾಡಿದ ಮಾತಿಗೆ ನಟ ಉಪೇಂದ್ರ ಅವರು ಕ್ಷಮೆ ಕೇಳಿದ್ದಾರೆ ಮತ್ತು ನೇರ ಪ್ರಸಾರದ ವೀಡಿಯೋವನ್ನೂ ಡಿಲೀಟ್​ ಮಾಡಿದ್ದಾರೆ.

ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. . ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ

ಎಂದು ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾಕೀಯ ಸ್ಥಾಪನೆ ದಿನದ ಹಿನ್ನೆಲೆಯಲ್ಲಿ ನಿನ್ನೆ ಉಪೇಂದ್ರ ಅವರು ಫೇಸ್​ಬುಕ್​ನಲ್ಲಿ ನೇರಪ್ರಸಾರದಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಸಂವಾದ ನಡೆಸಿದ್ದರು.

ಏನೋ ಕೇರ್​ಲೆಸ್​ ಆಗಿ ಸಜೆಸ್ಟ್​ ಮಾಡಲ್ಲ. ಕೇರ್​ಲೆಸ್​ ಆಗಿ ಏನೋ ಅವಹೇಳನ ಮಾಡಲ್ಲ. ಏನೋ ನಾವೂ ಮಾತಾಡ್ಬೇಕು, ಟೈಂ ಇದೆ ಕಮೆಂಟ್​ ಮಾಡೋಣ ಅಂತ ಬಾಯಿಗೆ ಬಂದಿದ್ದು ಕಮೆಂಟ್​ ಮಾಡೋದು ಅಂಥವರ ಬಗ್ಗೆ ಬಿಡಿ, ಅವರನ್ನ ಏನೂ ಮಾಡಕ್ಕೂ ಆಗಲ್ಲ. ಊರು ಅಂದ್ರೆ ಹೊಲಗೇರಿ ಇರುತ್ತೆ, ಇಂಥವರೂ ಇರ್ತಾರೆ ಜನ, ಅವರನ್ನೆಲ್ಲ ಬಿಟ್ಟಾಕೋಣ

ಎಂದು ನೇರ ಪ್ರಸಾರದಲ್ಲಿ ಉಪೇಂದ್ರ ಹೇಳಿದ್ದರು. ಉಪೇಂದ್ರ ಅವರು ಬಳಸಿದ ಹೊಲಗೇರಿ ಹೋಲಿಕೆಗೆ ತೀವ್ರ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆ ಕೇಳಿದ್ದಾರೆ.

LEAVE A REPLY

Please enter your comment!
Please enter your name here