ಶಾಸಕರಿಗೆ ಧಿಕ್ಕಾರವಿರಲಿ ಎಂದು ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್ ಅವರನ್ನು ಅಮಾನತುಗೊಳಿಸಲಾಗಿದೆ.
ಸೇವಾ ನಿಯಮಗಳ ಉಲ್ಲಂಘನೆ ಆರೋಪದಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆ ಕಾನ್ಸ್ಸ್ಟೇಬಲ್ ಲತಾ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.
ಲತಾ ಅವರನ್ನು ಕಡೂರು ಠಾಣೆಯಿಂದ ತರೀಕೆರೆ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಲತಾ ಅವರು ನನಗೆ ಏನಾದರೂ ತೊಂದರೆಯಾದ್ರೆ ಶಾಸಕರೇ ಕಾರಣ, ಕಡೂರು ಎಂಎಲ್ಗೆ ನನ್ನ ಕಡೆಯಿಂದ ಧಿಕ್ಕಾರವಿರಲಿ ಎಂದು ಕಡೂರು ಕಾಂಗ್ರೆಸ್ ಶಾಸಕ ಆನಂದ್ ಅವರ ವಿರುದ್ಧ ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿ ಆಕ್ರೋಶ ಹೊರಹಾಕಿದ್ದರು.
ತಮ್ಮ ವರ್ಗಾವಣೆಯನ್ನು ವಿರೋಧಿಸಿ ಕಡೂರು ಠಾಣೆಯ ಸಬ್ಇನ್ಸ್ಪೆಕ್ಟರ್ ಜೊತೆಗೂ ಲತಾ ಗಲಾಟೆ ಮಾಡಿದ್ದರು.
ADVERTISEMENT
ADVERTISEMENT