Accident: ಚಿಕ್ಕಮಗಳೂರು ಪ್ರವಾಸಕ್ಕೆ ಹೊರಟ್ಟಿದ್ದವರ ಕಾರು ಲಾರಿಗೆ ಡಿಕ್ಕಿ – ವಿಜಯಪುರ ಜಿಲ್ಲೆಯ ನಾಲ್ವರು, ಕೋಲಾರದ ಓರ್ವ ಸಾವು

ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ.

ಸೊಲ್ಹಾಪುರ ಮತ್ತು ಮಂಗಳೂರು ನಡುವೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. 

ಕಾರಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೇ ಮೂವರು ಗಾಯಗೊಂಡಿದ್ದರು. ಗಾಯಾಳುಗಳಲ್ಲಿ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಖಾಸಗಿ ಬ್ಯಾಂಕ್​ನಲ್ಲಿ ನೌಕರರಾಗಿರುವ ಸಂಗನ ಬಸವಪ್ಪ ಅವರ ಕುಟುಂಬ ಕಾರಿನಲ್ಲಿ ವಿಜಯಪುರದಿಂದ ಚಿಕ್ಕಮಗಳೂರಿಗೆ ಪ್ರವಾಸ ಹೋಗುತ್ತಿದ್ದರು.

ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಗ್ರಾಮದ 36 ವರ್ಷದ ಸಂಗನಬಸವಪ್ಪ, ಅವರ ಪತ್ನಿ 29 ವರ್ಷದ ರೇಖಾ, 7 ವರ್ಷದ ಮಗ ಆಗಸ್ತ್ಯ, ಇವರ ಸಂಬಂಧಿ 26 ವರ್ಷದ ಭೀಮಾಶಂಕರ್​ ಮತ್ತು ಭೀಮಾಶಂಕರ್​ ಅವರ ಸ್ನೇಹಿತ ಕೋಲಾರ ಜಿಲ್ಲೆಯ ಕೆಜಿಎಫ್​ ಮೂಲದ 24 ವರ್ಷದ ಮಧುಸೂದನ್​ ಮೃತಪಟ್ಟಿದ್ದಾರೆ.

ಸಂಗನಬಸವಪ್ಪ ಅವರ 3 ವರ್ಷದ ಮಗ ಆದರ್ಶ, 5 ವರ್ಷದ ಪುತ್ರಿ ಅನ್ವಿಕಾ ಮತ್ತು ಕಾರಿನ ಚಾಲಕನಿಗೆ ಗಾಯಗಳಾಗಿವೆ.

LEAVE A REPLY

Please enter your comment!
Please enter your name here