ಹದಿನೇಳು ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಇವರಲ್ಲಿ ಎಸಿಬಿಯಲ್ಲಿದ್ದ 11 ಮಂದಿ ಡಿವೈಎಸ್ಪಿಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ಡಿವೈಎಸ್ಪಿಗಳಾಗಿ ವರ್ಗಾಯಿಸಲಾಗಿದೆ.
ಇವರಲ್ಲದೇ, ದಾವಣಗೆರೆ ಐಜಿಪಿ ಕಚೇರಿಯಲ್ಲಿದ್ದ ಭರತ್ ರೆಡ್ಡಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ, ಕೇಂದ್ರ ವಲಯ ಐಜಿಪಿ ಕಚೇರಿಯಲ್ಲಿದ್ದ ಗಿರೀಶ್ ಅವರನ್ನೂ ಕರ್ನಾಟಕ ಲೋಕಾಯಕ್ತಕ್ಕೆ ವರ್ಗಾಯಿಸಲಾಗಿದೆ.
ಸಿಐಡಿ ಡಿವೈಎಸ್ಪಿ ವೀರೇಂದ್ರ ಕುಮಾರ್ ಅವರನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಅಬ್ದುಲ್ ಖಾದರ್ ಅವರನ್ನು ಬೆಂಗಳೂರು ನಗರ ಸಂಚಾರ ಮತ್ತು ರಸ್ತೆ ಸುರಕ್ಷತಾ ಕೋಶಕ್ಕೆ ವರ್ಗಾಯಿಸಲಾಗಿದೆ.
ಮಲ್ಲೇಶ್ ದೊಡ್ಡಮನಿ ಅವರನ್ನು ದಾವಣಗೆರೆ ಉಪ ವಿಭಾಗ ಡಿವೈಎಸ್ಪಿ ಆಗಿ ವರ್ಗಾಯಿಸಲಾಗಿದೆ.