ಜೆಡಿಎಸ್​ ಮೊದಲ ಪಟ್ಟಿಯಲ್ಲೇ ಮೇಳೈಸಿದ ಕುಟುಂಬ

ಜ್ಯೋತಿಷ್ಯದ ಕಾರಣದಿಂದ ಎರಡು ಬಾರಿ ಮುಂದೂಡಿಕೆ ಆಗಿದ್ದ ಜೆಡಿಎಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಇವತ್ತು ಬಿಡುಗಡೆ ಆಗಿದೆ.

ವಿಧಾನಸಭಾ ಚುನಾವಣೆಗೆ ಘೋಷಣೆ ಆದ ಜೆಡಿಎಸ್​ 93 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕುಟುಂಬ ರಾಜಕಾರಣ ಮೇಳೈಸಿರುವುದು ವಿಶೇಷ.

ರಾಮನಗರದಿಂದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮತ್ತು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಟಿಕೆಟ್​ ಪಡೆದಿದ್ದಾರೆ.

ಚನ್ನಪಟ್ಟಣದಿಂದ ಹೆಚ್​ ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ.

ಹುಣಸೂರಿನಿಂದ ಜಿ ಟಿ ದೇವೇಗೌಡರ ಮಗ ಹರೀಶ್​ ಗೌಡಗೆ ಟಿಕೆಟ್​ ನೀಡಲಾಗಿದೆ.

ಜಿ ಟಿ ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಅಚ್ಚರಿಯೆಂದರೆ ಜೆಡಿಎಸ್​ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರ ಮಗ ಸಿ ಎಂ ಫಯಾಜ್​ ಅವರಿಗೆ ಬೀದರ್​ ಜಿಲ್ಲೆಯ ಹುಮ್ನಾಬಾದ್​ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿದೆ.

ಭದ್ರಾವತಿಯಿಂದ ದಿವಂಗತ ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ಪತ್ನಿ ಶಾರದಾ ಅಪ್ಪಾಜಿಗೌಡ ಅವರಿಗೆ ಟಿಕೆಟ್​ ನೀಡಲಾಗಿದೆ.