Indonesia – ಫುಟ್ಬಾಲ್ ಮೈದಾನದಲ್ಲಿ ಕಾಲ್ತುಳಿತ, 129ಮಂದಿ ದುರ್ಮರಣ

ಇಂಡೋನೆಷ್ಯಾದಲ್ಲಿ (Indonesia)ಘನಘೋರ ದುರಂತ ಸಂಭವಿಸಿದೆ. ಫುಟ್ಬಾಲ್ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Football Match stamped )129ಮಂದಿ ದುರ್ಮರಣ ಹೊಂದಿದ್ದಾರೆ.

ಪೂರ್ವ ಜಾವ ಪ್ರಾವೀನ್ಸ್ ನಲ್ಲಿ ನಿರ್ವಹಿಸಿದ ಮ್ಯಾಚ್ ವೇಳೆ ಈ ದುರಂತ ಸಂಭವಿಸಿದೆ. ಮೃತರಲ್ಲಿ ಇಬ್ಬರು ಪೊಲೀಸರು ಕೂಡ ಇದ್ದಾರೆ.  180ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವ ಇದೆ.

ಶನಿವಾರ ರಾತ್ರಿ ಪೆರ್ಸೆಬಾಯ ಸುರೇಬಾಯ ತಂಡದ ಕೈಯಲ್ಲಿ ಅರೆಮೋ ತಂಡ ಸೋಲು ಅನುಭವಿಸಿತು. ಈ ಬೆನ್ನಲ್ಲೇ ಎರಡು ತಂಡಗಳ ಅಭಿಮಾನಿಗಳು ಘರ್ಷಣೆಗೆ (Riots)ಇಳಿದರು.

ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಕೈಗೆ ಸಿಕ್ಕಿದ್ದನ್ನೆಲ್ಲ ನಾಶ ಮಾಡಿದರು.

ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಟಿ ಚಾರ್ಜ್ ಮಾಡಿದರು. ಆಶ್ರುವಾಯು ಪ್ರಾಯೋಗಿಸಿದರು. ಜನ ದಿಕ್ಕೆಟ್ಟು ಓಡಿದರು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ.

ಇಂಡೋನೆಷ್ಯಾ ಸರ್ಕಾರ ತನಿಖೆಗೆ ಆದೇಶ  ನೀಡಿದೆ.