YSR ತೆಲಂಗಾಣ ಕಾಂಗ್ರೆಸ್​ ನಾಯಕಿ – ಡಿಕೆಶಿವಕುಮಾರ್​ ಭೇಟಿ – ಬದಲಾಗಲಿದ್ಯಾ ತೆಲಂಗಾಣ ಲೆಕ್ಕಾಚಾರ..?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ವೈಎಸ್​ಆರ್​ ತೆಲಂಗಾಣ (YSR Telagana Congress) ಕಾಂಗ್ರೆಸ್​ ಪಕ್ಷದ ಸಂಸ್ಥಾಪಕಿ ವೈ ಎಸ್​ ಶರ್ಮಿಲಾ (Y S Sharmila) ಅವರು ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ( D K Shivakumar)​ ಅವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರಿನ ಡಿಕೆಶಿವಕುಮಾರ್​ ಅವರ ನಿವಾಸದಲ್ಲಿ ಭೇಟಿ ನಡೆದಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ದಿವಂಗತ ರಾಜಶೇಖರ ರೆಡ್ಡಿ ಅವರ ಪುತ್ರಿ ಆಗಿರುವ ವೈ ಎಸ್​ ಶರ್ಮಿಲಾ ಅವರು ಸಹೋದರ ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್​ ರೆಡ್ಡಿಗೆ ಸೆಡ್ಡು ಹೊಡೆದು ತೆಲಂಗಾಣದಲ್ಲಿ ತಮ್ಮದೇ ಪ್ರಾದೇಶಿಕ ಪಕ್ಷವನ್ನು ಕಟ್ಕೊಂಡಿದ್ದಾರೆ.
ಮೂಲಗಳ ಪ್ರಕಾರ ಶರ್ಮಿಲಾ ಅವರಿಗೆ ದೂರವಾಣಿ ಕರೆ ಮಾಡಿದ್ದ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಅವರು ಕಾಂಗ್ರೆಸ್​ಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಈ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪಕ್ಷ ಕಟ್ಟುವ ಭಾಗವಾಗಿ ಶರ್ಮಿಲಾ ಅವರು ತೆಲಂಗಾಣದಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ.