ಈ ರೀತಿ ಮೊದಲ ಬಾರಿಗೆ ಔಟಾದವರು – ಈ ಮೂವರು ಆಟಗಾರರು..!

ಕ್ರಿಸ್​​ಗೆ ಬಂದ ಬಳಿಕ ಎರಡು ನಿಮಿಷದೊಳಗೆ ಮೊದಲ ಬಾಲ್​ ಎದುರಿಸಿದ ಕಾರಣಕ್ಕೆ ಐಸಿಸಿ ನಿಯಮಗಳ ಪ್ರಕಾರ ಶ್ರೀಲಂಕಾ ಬ್ಯಾಟ್ಸ್​ಮನ್​ ಅಂಜೆಲೋ ಮಾಥ್ಯೂಸ್​ ಟೈಮ್ಡ್​​ ಔಟ್​ ನಿಯಮದಡಿ ಔಟಾಗಿದ್ದಾರೆ.

ಒಂದೂ ಎಸೆತವನ್ನೂ ಎದುರಿಸದೇ ಟೈಮ್ಸ್​ಔಟ್​ ನಿಯಮಗಳ ಪ್ರಕಾರ ಔಟ್​ ಆದ ಮೊದಲ ಬ್ಯಾಟ್ಸ್​ಮನ್​ ಎಂಬ ಕಳಂಕ ಅಂಜೆಲೋ ಮ್ಯಾಥ್ಯೂಸ್​ ಅವರ ಪಾಲಾಗಿದೆ.

ಇದೇ ರೀತಿಯಲ್ಲಿ ಐಸಿಸಿ ಕ್ರಿಕೆಟ್​ ನಿಯಮಗಳ ಅಡಿಯಲ್ಲಿ ಮೊದಲ ಬಾರಿಗೆ ಔಟ್​ ಆದ ಆಟಗಾರರ ಪಟ್ಟಿ ಈ ರೀತಿ ಇದೆ.

1947ರಲ್ಲಿ ಭಾರತದ ಆಟಗಾರ ವಿನೋದ್​ ಮಂಕಡ್​ ಅವರು ನಾನ್​ಸ್ಟ್ರೈಕರ್ಸ್​ ಎಂಡ್​ನಲ್ಲಿ ಔಟಾಗುವ ಮೂಲಕ ಈ ರೀತಿ ಔಟಾದ ಮೊದಲ ಆಟಗಾರ ಎನಿಸಿಕೊಂಡರು.

ಫೀಲ್ಡ್​​ನಲ್ಲಿ ಕಿರಿಕ್​ ತೆಗೆದರು ಎಂಬ ಕಾರಣಕ್ಕೆ 1987ರಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ರಮಿಜ್​ ರಾಜಾ ಅವರನ್ನು ಔಟ್​ ಮಾಡಲಾಯಿತು. ಈ ಕಾರಣಕ್ಕೆ ಔಟಾದ ಮೊದಲ ಆಟಗಾರ ರಮಿಜ್​ ರಾಜಾ.

2008ರಲ್ಲಿ ಡಿಆರ್​ಎಸ್​ ನಿಯಮ ಜಾರಿ ಆದ ಬಳಿಕ ಆ ನಿಯಮದಡಿಯಲ್ಲಿ ವಿಕೆಟ್​ ಒಪ್ಪಿಸಿದ ಮೊದಲ ಆಟಗಾರ ನಮ್ಮವರೇ ಆದ ವಿರೇಂದ್ರ ಸೆಹ್ವಾಗ್​.

LEAVE A REPLY

Please enter your comment!
Please enter your name here