ದೇಶದಲ್ಲಿ ಸಗಟು ಹಣದುಬ್ಬರ (ಬೆಲೆಏರಿಕೆ) ದರ ಶೇಕಡಾ 15.08ಕ್ಕೆ ನೆಗೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಗಟು ಹಣದುಬ್ಬರ ದರ ಶೇಕಡಾ ಶೇಕಡಾ 10.74ರಷ್ಟಿತ್ತು.
ಅಂದಹಾಗೆ ಕಳೆದ 9 ವರ್ಷಗಳಲ್ಲೇ ಅಂದರೆ 2013ರಲ್ಲಿ ಯುಪಿಎ ಸರ್ಕಾರದ ಕಾಲಾವಧಿಗಿಂತ ಸಗಟು ಹಣದುಬ್ಬರ ಈಗ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.
ಸೌಂದರ್ಯ ವರ್ಧಕ ತೈಲಗಳು, ಲೋಹಗಳು, ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ, ಆಹಾರ ಪದಾರ್ಥಗಳು ಮತ್ತು ಆಹಾರ ಉತ್ಪನ್ನಗಳು, ಆಹಾರೇತರ ಉತ್ಪನ್ನಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳ ದುಬಾರಿ ಆಗಿರುವುದು ಸಗಟು ಹಣದುಬ್ಬರ ಹೆಚ್ಚಳಕ್ಕೆ ಕಾರಣ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅAಶದಲ್ಲಿ ಹೇಳಲಾಗಿದೆ.
ಸತತ 13 ತಿಂಗಳಿAದ ಹಣದುಬ್ಬರ ದರ ಎರಡಂಕಿ ದಾಟುತ್ತಿದೆ.
ಇತ್ತೀಚೆಗಷ್ಟೇ ಬಿಡುಗಡೆ ಆದ ಗ್ರಾಹಕ ಹಣದುಬ್ಬರ ದರ 8 ವರ್ಷಗಳಲ್ಲೇ ಅಧಿಕವಾಗಿತ್ತು.