ದೇಶದಲ್ಲಿ ಮಾಂಸಹಾರ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ, ಅದರಲ್ಲೂ ಪುರುಷರು ಹೆಚ್ಚು ಮಾಂಸಹಾರ ಸೇವಿಸುತ್ತಾರೆ ಎಂದು ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಕೈಗೊಳ್ಳಲಾದ ರಾಷ್ಟಿçÃಯ ಆರೋಗ್ಯ ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಎಂದೂ ಮಾಂಸ ಸೇವಿಸದ (ಮೀನು, ಮೊಟ್ಟೆ, ಕೋಳಿ ಮಾಂಸ ಅಥವಾ ಮಾಂಸ) 15 ರಿಂದ 49 ವರ್ಷ ವಯಸ್ಸಿನ ಪುರುಷರ ಪ್ರಮಾಣ ಶೇಕಡಾ 16.6ಕ್ಕೆ ಕುಸಿದಿದೆ. ಈ ಹಿಂದಿನ ಸಮೀಕ್ಷೆಯಲ್ಲಿ ಮಾಂಸಹಾರ ಸೇವಿಸದ ಈ ವರ್ಗದ ಪ್ರಮಾಣ ಶೇಕಡಾ 21ರಷ್ಟಿತ್ತು. ಅಂದರೆ ಶೇಕಡಾ 5ರಷ್ಟು ಕುಸಿತ ಆಗಿದೆ. ಅಂದರೆ ಮಾಂಸಹಾರ ಸೇವನೆ ಮಾಡುವ ಈ ವರ್ಗದ ಪ್ರಮಾಣ ಹೆಚ್ಚಳ ಆಗಿದೆ.
ಆದರೆ 15-49 ವರ್ಷ ವಯಸ್ಸಿನ ಎಂದೂ ಮಾಂಸ ಸೇವಿಸದ ಮಹಿಳೆಯರ ಪ್ರಮಾಣದಲ್ಲಿ ಅಷ್ಟೇನೂ ಬದಲಾವಣೆ ಆಗಿಲ್ಲ. 2015-16ರಲ್ಲಿ ಶೇಕಡಾ 29.9ರಷ್ಟಿದ್ದ ಮಾಂಸಹಾರ ಸೇವಿಸದ ಈ ವಯಸ್ಸಿನ ಮಹಿಳೆಯರ ಪ್ರಮಾಣ ಈಗ ಶೇಕಡಾ 29.4ಕ್ಕೆ ಇಳಿದಿದೆ. ಅಂದರೆ ಮಾಂಸಹಾರ ಸೇವಿಸುವ ಈ ವಯಸ್ಸಿನ ಮಹಿಳೆಯರ ಪ್ರಮಾಣ ಕೇವಲ ಶೇಕಡಾ 0.5ರಷ್ಟು ಹೆಚ್ಚಳ ಆಗಿದೆ.
ಅಂದರೆ 15-49 ವರ್ಷ ವಯಸ್ಸಿನವರಲ್ಲಿ ಶೇಕಡಾ 83.4ರಷ್ಟು ಪುರುಷರು ಮತ್ತು ಶೇಕಡಾ 70.6ರಷ್ಟು ಮಹಿಳೆಯರು ದಿನನಿತ್ಯ ಮಾಂಸಹಾರ ಸೇವಿಸುತ್ತಾರೆ. ಕನಿಷ್ಢ ವಾರಕ್ಕೊಂದು ಸಲವಾದರೂ ಮೀನು, ಮೊಟ್ಟೆ, ಕೋಳಿ ಮಾಂಸ ಮತ್ತು ಮಾಂಸ ಸೇವನೆ ಮಾಡುವ ಪುರುಷರು ಮತ್ತು ಮಹಿಳೆಯರ ಪ್ರಮಾಣ ಕೂಡಾ ಹೆಚ್ಚಿದೆ.