ಎರಡು ರೈಲುಗಳು ಒಂದೇ ಹಳಿಯಲ್ಲಿ ಮುಖಾಮುಖಿ ಎದುರಾದರೂ ಅಪಘಾತವಾಗುವುದನ್ನು ತಡೆಯಲು ಕವಚ್ ಎಂಬ ತಂತ್ರಜ್ಞಾನವನ್ನು ಅಳವಡಿಸಿದ್ದೇವೆ ಎಂದು ಕಳೆದ ವರ್ಷವಷ್ಟೇ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪ್ರಾತ್ಯಾಕ್ಷಿಕೆ ಮೂಲಕ ತೋರಿಸಿದ್ದರು.
ಇದೀಗ ಬಾಲಸೋರ್ ರೈಲು ದುರಂತ, ಕವಚ್ ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಬೆನ್ನಲ್ಲೇ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಕವಚ್ ಟೆಕ್ನಾಲಜಿಯ ಬಗ್ಗೆ ವರ್ಣಿಸಿದ್ದ ವೀಡಿಯೋಗಳು ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಘನಘೋರ ದುರಂತದ ಹೊಣೆ ಹೊತ್ತು ಅಶ್ವಿನಿ ವೈಷ್ಣವ್ ರಾಜೀನಾಮೆ ಕೊಡಬೇಕೆಂಬ ಕೂಗು ಕೇಳಿಬಂದಿದೆ.
ಕಾಂಗ್ರೆಸ್ ಯುವ ಅಧ್ಯಕ್ಷ ಬಿವಿ ಶ್ರೀನಿವಾಸ್ ಟ್ವೀಟ್ ಮಾಡಿ, ಕವಚ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ಒಂದು ರೈಲು ಹಳಿತಪ್ಪಿದಾಗ.. ಅದೇ ಹಳಿಯ ಮೇಲೆ ಮತ್ತೊಂದು ರೈಲು ಬಂದಾಗ.. ಕವಚ್ ಎಲ್ಲಿ ಹೋಯ್ತು?
ಅಂದಾಜು 300 ಮಂದಿ ಸಾವನ್ನಪ್ಪಿದ್ದಾರೆ. ಸರಿಸುಮಾರು ಸಾವಿರ ಮಂದಿ ಗಾಯಗೊಂಡಿದ್ದಾರೆ. ಈ ದುರಂತದ ಹೊಣೆಯನ್ನು ಯಾರು ವಹಿಸಿಕೊಳ್ಳುತ್ತಾರೆ
ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
जब एक Train Derail होकर दूसरे Railway Track पर आ गयी थी, तब 'Kavach' कहाँ था??
300 के आसपास मौतें, करीब 1000 लोग घायल। इन दर्दनाक मौतों के लिए कोई तो जिम्मेदार होगा? pic.twitter.com/Ys3RGZFRVS
— Srinivas BV (@srinivasiyc) June 3, 2023
ಪತ್ರಕರ್ತ ಶಶಿ ಎಸ್ ಸಿಂಗ್ ಎನ್ನುವವರು ಟ್ವೀಟ್ ಮಾಡಿ,
ಆಧುನಿಕ ರಾಜಕಾರಣದಲ್ಲಿ ಪಿಆರ್ ಎನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ ನಿಜ. ಆದರೆ, ಕೆಲವೊಮ್ಮೆ ವಾಸ್ತವ ಮಾತ್ರ ತದ್ವಿರುದ್ಧವಾಗಿರುತ್ತದೆ
ಎಂದಿದ್ದಾರೆ. ತಮ್ಮ ಟ್ವೀಟ್ ಜೊತೆ ಕವಚ್ ಬಗ್ಗೆ ಅಶ್ವಿನಿ ವೈಷ್ಣವ್ ನೀಡುವ ಪ್ರಾತ್ಯಾಕ್ಷಿಕೆ ವೀಡಿಯೋ ಟ್ಯಾಗ್ ಮಾಡುವುದನ್ನು ಮರೆಯುವುದಿಲ್ಲ.
PR is the most important thing in modern politics.
But sometimes, reality is totally different.. pic.twitter.com/pHkXzUeuga
— Shashi S Singh 🇮🇳 (@Morewithshashi) June 3, 2023