ADVERTISEMENT
ADVERTISEMENT
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತ್ಯಂತ ಜನಪ್ರಿಯ ರಾಜಕಾರಣಿ ಎಂಬ ಮಾತನ್ನು ನಾನು ನಂಬುವುದಿಲ್ಲ ಎಂದು ಎಐಸಿಸಿ ಪ್ರಮುಖ ನಾಯಕ ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜಗತ್ತಿನಲ್ಲಿಯೇ ಅಧಿಕ ಜನಪ್ರಿಯತೆ ಇದೆಯೆಲ್ಲಾ ಎಂಬ ಪ್ರಶ್ನೆ ಪತ್ರಕರ್ತರಿಂದ ರಾಹುಲ್ ಗಾಂಧಿಗೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅವರು,
ದೇಶದ ಎಲ್ಲಾ ವ್ಯವಸ್ಥೆಗಳನ್ನು ನರೇಂದ್ರ ಮೋದಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಮಾಧ್ಯಮಗಳನ್ನು ಕೂಡ ಅಷ್ಟೇ.. ಮೋದಿಗೆ ಜನಪ್ರಿಯತೆ ಇದೆ. ವಿಶೇಷ ಜನಾದರಣೆ ಇದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು, ವಿಶೇಷ ಕಾರ್ಯಕ್ರಮಗಳನ್ನು ನಾನು ನಂಬಲ್ಲ.
ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುವುದು ಅಸಾಧ್ಯ ಎಂದು ಮೀಡಿಯಾಗಳು ಹೇಳುತ್ತಿವೆ. ಇದು ಅತಿಶಯೋಕ್ತಿ. ವಾಸ್ತವದಲ್ಲಿ ಅವರಲ್ಲಿ ಸಾಕಷ್ಟು ದೌರ್ಬಲ್ಯಗಳಿವೆ.
ಈ ವರ್ಷ ನಡೆಯಲಿರುವ ಮೂರ್ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನು ನಾವು ಕರ್ನಾಟಕದಲ್ಲಿ ಸೋಲಿಸಿದಂತೆಯೇ ಸೋಲಿಸುತ್ತೇವೆ. ಇದಕ್ಕೆ ಅಗ್ತಯವಾದ ಎಲ್ಲಾ ಸಿದ್ದತೆಗಳನ್ನು ನಮ್ಮ ಪಕ್ಷ ನಡೆಸಿದೆ.
ದೇಶದಲ್ಲಿ ನಿರುದ್ಯೋಗ, ದರ ಏರಿಕೆಯಂತಹ ಸಮಸ್ಯೆಯಿಂದ ಜನತೆ ದೊಡ್ಡ ಮಟ್ಟದಲ್ಲಿ ತೊಂದರೆ ಅನುಸರಿಸುತ್ತಿದ್ದಾರೆ
ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.