ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿರುವ ಬಸವರಾಜ ಹೊರಟ್ಟಿ ಅವರ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಾಖಲೆಯ ಸತತ 8ನೇ ಬಾರಿಗೆ ಹೊರಟ್ಟಿ ಅವರು ಪರಿಷತ್ ಪ್ರವೇಶಿಸಿದ್ದಾರೆ.
ಎಣಿಕೆ ಆಗಿರುವ 14,360 ಮತಗಳ ಪೈಕಿ ಬಸವರಾಜ ಹೊರಟ್ಟಿ ಅವರು 9,266 ಮೊದಲ ಪ್ರಾಶಸ್ತö್ಯದ ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್ನ ಬಸವರಾಜ ಗುರಿಕಾರ ಅವರು 4,597 ಮೊದಲ ಪ್ರಾಶಸ್ತö್ಯದ ಮತಗಳನ್ನು ಪಡೆದಿದ್ದಾರೆ.
ಪಕ್ಷೇತರರು 224 ಮೊದಲ ಆಯ್ಕೆಯ ಮತಗಳನ್ನು ಪಡೆದಿದ್ದಾರೆ. 1,223 ಮತಗಳು ತಿರಸ್ಕೃತಗೊಂಡಿವೆ.