ಒಟಿಟಿಯಲ್ಲೂ ವಿಕ್ರಾಂತ್ ರೋಣನದ್ದೇ ಹವಾ : ಕಿಚ್ಚನ ಹೆಸರಿಗೆ ಮತ್ತೊಂದು ರೆಕಾರ್ಡ್​

Vikranth Rona

ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ (Vikranth Rona) ಜೀ5 ಒಟಿಟಿಯಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿದೆ. ಪತ್ತೇದಾರಿ ಕಥೆ ಹೊತ್ತುಬಂದಿದ್ದ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ಸುದೀಪ್ ಹುಟ್ಟುಹಬ್ಬದಂದು ಸೆಪ್ಟಂಬರ್ 2ಕ್ಕೆ ಜೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಕೇವಲ 24 ಗಂಟೆಯಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.

ಜುಲೈ 28ರಂದು ಬಿಗ್ ಸ್ಕ್ರೀನ್ ನಲ್ಲಿ ದಿಬ್ಬಣ ಹೊರಟಿದ್ದ ವಿಕ್ರಾಂತ್ ರೋಣನಿಗೆ ಸುದೀಪಿಯನ್ಸ್ ಬಹುಪರಾಕ್ ಎಂದಿದ್ದರು. ತ್ರಿಡಿಯಲ್ಲಿ ಕಿಚ್ಚನ ಇನ್ನೊಂದು ಅವತಾರ ಕಣ್ತುಂಬಿಕೊಂಡು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಬಿಟೌನ್ ಬೊಂಬೆ ಜಾಕ್ವೆಲಿನ್ ಫರ್ನಾಂಡಿಸ್, ಅನೂಪ್ ಭಂಡಾರಿ, ನೀತಾ ಆಶೋಕ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿದ್ದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲೂ ಕೋಟಿ-ಕೋಟಿ ಕಮಾಯಿ ಮಾಡಿತ್ತು.

ಇದನ್ನೂ ಓದಿ : ವಿಕ್ರಾಂತ್ ರೋಣ ಸಿನೆಮಾಗೆ ನೆಗೆಟಿವ್ ಕಾಮೆಂಟ್ – ಸಿಡಿದೆದ್ದ ಕಿಚ್ಚನ ಅಭಿಮಾನಿಗಳು

ಅದ್ಧೂರಿ ಸೆಟ್ ನಲ್ಲಿ ಚಿತ್ರೀಕರಿಸಿದ್ದ ರಾ ರಾ ರಕ್ಕಮ್ಮ ಹಾಡು ಹಿಟ್ ಲೀಸ್ಟ್ ಸೇರಿತ್ತು. ಬಿ ಅಜನೀಶ್ ಲೋಕನಾಥ್ ಸಂಗೀತವಿದ್ದ ಎಲ್ಲಾ ಹಾಡುಗಳು ಪ್ರೇಕ್ಷಕ ಗಮನಸೆಳೆದಿದ್ದವು. ಸಿಲ್ವರ್ ಸ್ಕ್ರೀನ್ ನಲ್ಲಿ ಗುಮ್ಮನ ಆರ್ಭಟ ಮಿಸ್ ಮಾಡಿಕೊಂಡ ಪ್ರೇಕ್ಷಕರು ಈಗ ಕುಳಿತು ವಿಕ್ರಾಂತ್ ರೋಣ (Vikranth Rona) ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ : ಒಟಿಟಿ ವೇದಿಕೆಗೆ ‘ವಿಕ್ರಾಂತ್ ರೋಣ’ ಚಿತ್ರ – ಇಲ್ಲಿದೆ ಫುಲ್ ಡೀಟೇಲ್ಸ್

LEAVE A REPLY

Please enter your comment!
Please enter your name here