ಒಟಿಟಿ ವೇದಿಕೆಗೆ ‘ವಿಕ್ರಾಂತ್ ರೋಣ’ ಚಿತ್ರ – ಇಲ್ಲಿದೆ ಫುಲ್ ಡೀಟೇಲ್ಸ್

Vikranth Rona

ಕಳೆದ ಜುಲೈ 26 ರಂದು ವಿಶ್ವಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದ್ದ ವಿಕ್ರಾಂತ್ ರೋಣ ಚಿತ್ರ (Vikranth Rona Film) ಸಾಕಷ್ಟು ಗಳಿಕೆಯನ್ನು ಕಂಡಿತ್ತು. ಇದೀಗ, ಈ ಚಿತ್ರ ಒಟಿಟಿ ವೇದಿಕೆಯತ್ತ ಮುಖ ಮಾಡಿದೆ.

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರ (Vikranth Rona Film) ಇದೇ ಸೆಪ್ಟಂಬರ್ 2 ರಂದು ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ಕಮರೊಟ್ಟುವಿನಲ್ಲಿ ನಡೆದ ಅಡ್ವೆಂಚರ್ ಕಥೆಯನ್ನಾಧರಿಸಿ ಅನೂಪ್ ಭಂಡಾರಿ ಚಿತ್ರ ನಿರ್ದೇಶನ ಮಾಡಿದ್ದರು. ವಿಶ್ಯುವಲ್ ಎಫೆಕ್ಟ್​, ಬಿಜಿಎಮ್ ಹಾಗೂ ತ್ರಿಡಿ ಸೇರಿದಂತೆ ಹಲವು ವಿಭಾಗಗಳು ಸಿನೆಮಾ ಆಕರ್ಷಣೆಯ ಪ್ರಮುಖ ಭಾಗಗಳಾಗಿದ್ದವು. ನಟ ಕಿಚ್ಚ ಸುದೀಪ್ ಅವರೂ ಈ ಚಿತ್ರದಲ್ಲಿ ಢಿಪರೆಂಟ್​​ ಲುಕ್​ನಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ : ವಿಕ್ರಾಂತ್ ರೋಣ ಸಿನೆಮಾಗೆ ನೆಗೆಟಿವ್ ಕಾಮೆಂಟ್ – ಸಿಡಿದೆದ್ದ ಕಿಚ್ಚನ ಅಭಿಮಾನಿಗಳು

ಜುಲೈ 26 ರಂದು ಬಿಡುಗಡೆಯಾಗಿದ್ದ ಸಿನೆಮಾ 150 ಕೋಟಿಗೂ ಹೆಚ್ಚಿನ ಆದಾಯ ಗಳಿಸಿದೆ. ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗದೇ ಇರುವವರು ಹಾಗೂ ಮತ್ತೊಮ್ಮೆ ಸಿನೆಮಾ ನೋಡಬೇಕು ಎನ್ನುವ ಹಂಬಲ ಇರುವವರಿಗೆ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ.

Vikranth Rona Film

ಪ್ರೊಡಕ್ಷನ್ ಪಾಲುದಾರರಲ್ಲಿ ಒಂದಾಗಿರುವ ಝೀ ಸ್ಟುಡಿಯೋ ಪ್ರಕಾರ ಸಿನಿಮಾ ಝೀ5ನಲ್ಲಿ ರಿಲೀಸ್ ಆಗಲಿದೆ. ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಿರುವ ಸಿನಿಮಾ ಝೀ5 ಮೂಲಕ ಪ್ರೇಕ್ಷಕರನ್ನು ತಲುಪಲಿದೆ.

ಈಗ ಝೀ5 ಟ್ವೀಟ್ ಮಾಡಿದ್ದು ಸೆ. 2ರಂದು ವಿಕ್ರಾಂತ್ ರೋಣ ಒಟಿಟಿ ರಿಲೀಸ್ ಆಗಲಿದೆ ಎಂಬ ಮಾಹಿತಿ ನೀಡಿದೆ.

ಇದನ್ನೂ ಓದಿ : ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾದ ‘ವಿಕ್ರಾಂತ್ ರೋಣ’

LEAVE A REPLY

Please enter your comment!
Please enter your name here