ಗುಜರಾತ್ನ ಬೋಟಾಡ್ ನಲ್ಲಿ ನಕಲಿ ಮದ್ಯ(Fake Liquor) ಸೇವಿಸಿ 19 ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಮಧ್ಯದ ಬದಲು ರಾಸಾಯನಿಕಗಳನ್ನು ಆರೋಪಿಗಳು ಮಾರಾಟ ಮಾಡಿದ್ದಾರೆ. ಭಾನುವಾರ ರಾತ್ರಿ ಇದನ್ನು ಸೇವಿಸಿದ ಹಲವು ಜನ ಅಸ್ವಸ್ಥಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆ ಮತ್ತು ಶಂಕಿತ ಆರೋಪಿಗಳ ವಿಚಾರಣೆಯ ನಂತರ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಸ್ಐಟಿ ತನಿಖೆಯ ಪ್ರಕಾರ, ಸಂತ್ರಸ್ತರು ಸೇವಿಸಿದ ವಿಷಕಾರಿ ಮದ್ಯದಲ್ಲಿ(Fake Liquor) ಇರುವ ಮೀಥೈಲ್ ಅನ್ನು ಎಮೋಸ್ ಎಂಬ ಕಂಪನಿಯು ಪೂರೈಸಿದೆ ಎಂದು ತಿಳಿದುಬಂದಿದೆ. ಗೋಡೌನ್ ಮ್ಯಾನೇಜರ್ ಜಯೇಶ್ ರಾಜು ತನ್ನ ಸಂಬಂಧಿ ಸಂಜಯ್ ಗೆ 200 ಲೀಟರ್ ಮೀಥೈಲ್ ಅನ್ನು 60,000 ರೂ ಮಾರಾಟ ಮಾಡಿದ್ದರು. ಇದನ್ನೂ ಓದಿ : ವಿದ್ಯಾರ್ಥಿಗಳಿಂದ ಮೋಜು ಮಸ್ತಿ – ಪಬ್ ಮೇಲೆ ಭಜರಂಗದಳ ಕಾರ್ಯಕರ್ತರ ದಾಳಿ – Pratikshana News
ಸಂಜಯ್ ಮತ್ತು ಅವರ ಸಹವರ್ತಿ ಪಿಂಟು ನಂತರ ದೇಶೀಯ ನಿರ್ಮಿತ ಮದ್ಯದ ಹೆಸರಿನಲ್ಲಿ ಮೀಥೈಲ್ ಮತ್ತು ರಾಸಾಯನಿಕಗಳನ್ನು ತುಂಬಿದ ಪೌಚ್ಗಳನ್ನು ಜನರಿಗೆ ಮಾರಾಟ ಮಾಡಿದ್ದಾರೆ. ಈ ನಕಲಿ ಮಧ್ಯ(Fake Liquor) ಸೇವಿಸಿದ ಜನ ಅಲ್ಲಿಯೇ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.
ಒಟ್ಟು 600 ಲೀಟರ್ ಮೀಥೈಲ್ ಅನ್ನು ಎಮೋಸ್ ಕಂಪನಿಯು ಪೂರೈಸಿದೆ. ಇದರಲ್ಲಿ ಸುಮಾರು 450 ಲೀಟರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.