ಮುಂಗಾರು ಅಧಿವೇಶನದ ಆರಂಭದಲ್ಲಿಯೇ ಅಡಳಿತ ಸರ್ಕಾರಕ್ಕೆ ಹಲವು ವಿಘ್ನಗಳು ಎದುರಾಗುತ್ತಿವೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ 19 ಜನ ಸಂಸದರನ್ನು ಒಂದು ವಾರಗಳ ಕಾಲ ಅಧಿವೇಶನದಿಂದ ಅಮಾನತು ಮಾಡಲಾಗಿದೆ.
ಸೋಮವಾರವಷ್ಟೇ 4 ಜನ ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಈ ಅಧಿವೇಶನದ ಭಾಗವಹಿಸುವಿಕೆಯಿಂದಲೇ ಅಮಾನತು ಮಾಡಲಾಗಿತ್ತು. ಇದನ್ನೂ ಓದಿ : ಲೋಕಸಭಾ ಅಧಿವೇಶನ : ನಾಲ್ವರು ಕಾಂಗ್ರೆಸ್ ಸಂಸದರು ಅಮಾನತು – Pratikshana News
ಕಾಂಗ್ರೆಸ್ ಸಂಸದರು ಸದನದ ಒಳಗಡೆ ಆಡಳಿತ ಸರ್ಕಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಸಭಾಪತಿ ಓಂ ಪ್ರಕಾಶ್ ಬಿರ್ಲಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈಗ ರಾಜ್ಯಸಭೆಯಲ್ಲೂ ಸರ್ಕಾರದ ವಿರುದ್ಧ ವಿಪಕ್ಷಗಳು ನಿರಂತರ ಪ್ರತಿಭಟನೆ ನಡೆಯುತ್ತಿವೆ. ಸರ್ಕಾರದ ವಿರುದ್ಧ ಪೋಸ್ಟರ್ ತೋರಿಸಿ ಪ್ರತಿಭಟನೆ ನಡೆಸಿದ 19 ಜನ ವಿಪಕ್ಷ ರಾಜ್ಯಸಭಾ ಸಂಸದರನ್ನು ಅಮಾನತು ಮಾಡಿ ಸಭಾಪತಿ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ.
ಅಮಾನತಾದ ರಾಜ್ಯಸಭಾ ಸಂಸದರು :
ಸುಶ್ಮಿತಾ ದೇವ್ ತೃಣಮೂಲ ಕಾಂಗ್ರೆಸ್ ಮೌಸಮ್ ನೂರ್ ತೃಣಮೂಲ ಕಾಂಗ್ರೆಸ್ ಶಾಂತಾ ಚೆಟ್ರಿ ತೃಣಮೂಲ ಕಾಂಗ್ರೆಸ್
ದೊಲ ಸೆನ್ ತೃಣಮೂಲ ಕಾಂಗ್ರೆಸ್
ಸಂತನು ಸೆನ್ ತೃಣಮೂಲ ಕಾಂಗ್ರೆಸ್
ಅಭಿ ರಂಜನ್ ತೃಣಮೂಲ ಕಾಂಗ್ರೆಸ್
ನಡಿಮುಲ್ ಹಾಕ್ವೆ ತೃಣಮೂಲ ಕಾಂಗ್ರೆಸ್
ಮಹಮ್ಮದ್ ಅಬ್ದುಲ್ಲ ಡಿಎಂಕೆ
ಲಿಂಗಯ್ಯ ಯಾದವ್ ಟಿಆರ್ಎಸ್
ರಹೀಮ್ ಸಿಪಿಐ(ಎಮ್)
ರವಿಹಂದ್ರ ವದ್ದಿರಾಜು ಟಿಆರ್ಎಸ್
ಎಸ್ ಕಲ್ಯಾಣಸುಂದರಮ್ ಡಿಎಂಕೆ
ಆರ್ ಗಿರಿರಂಜನ್ ಡಿಎಂಕೆ
ಎನ್ಆರ್ ಎಲಾಂಗೊ ಡಿಎಂಕೆ
ವಿ ಶಿವದಾಸನ್ ಸಿಪಿಐ(ಎಮ್)
ಷಣ್ಮುಗಂ ಡಿಎಂಕೆ
ದಾಮೋದರ್ ರಾವ್ ದಿವಕೊಂಡ ಟಿಆರ್ಎಸ್
ಸಂತೋಷ್ ಕುಮಾರ್ ಪಿ ಸಿಪಿಐ
ಕನಿಮೋಜಿ ಎನ್ವಿಎನ್ ಸೋಮು ಡಿಎಂಕೆ