ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ಪೋರ್ನ್ ಸಿನೆಮಾ ನಟಿಗೆ ಹಣ ಸಂದಾಯ ಆರೋಪದಡಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ.

2016ರಲ್ಲಿ ಪೋರ್ನ್ ಸಿನೆಮಾ ನಟಿ ಸ್ಟ್ರೋಮಿ ಡೇನಿಯಲ್ ಗೆ ಹಣ ಸಂದಾಯ ಮಾಡಿದ ಆರೋಪ ಸಾಬೀತಾಗಿತ್ತು. 2006ರಲ್ಲಿ Stormy Daniels ಮತ್ತು ಟ್ರಂಪ್ ದಾನಾರ್ಥ ನಡೆದಿದ್ದ ಗಾಲ್ಫ್ ಪಂದ್ಯಾವಳಿ ವೇಳೆ ಲೈಂಗಿಕ ಕ್ರಿಯೆ ನಡೆಸಿದ್ದರು.

ಈ ಲೈಂಗಿಕ ಸಂಬಂಧ ಬಗ್ಗೆ ಮಾತಾಡದಂತೆ ಟ್ರಂಪ್ ತನ್ನ ವಕೀಲ ಮೈಕೆಲ್ ಕೊಹೇನ್ ಮೂಲಕ ಹಣ ಸಂದಾಯ ಮಾಡಿದ್ದರು. 2018ರಲ್ಲಿ CBS ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮೊದಲು ವಕೀಲರ ಮೂಲಕ ಹಣ ಸಂದಾಯ ಮಾಡು

ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಟ್ರಂಪ್.

ಜಾಮೀನು ಪಡೆದು ಟ್ರಂಪ್ ಫ್ಲೋರಿಡಾಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.

2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.