ಗ್ಲೋಬಲ್ ಲೊಕೇಷನ್ ಟೆಕ್ನಾಲಜಿ ಸಂಸ್ಥೆ ಟಾಮ್ ಟಾಮ್ ಭಾರತದ ಟಾಪ್ 10 ಟ್ರಾಫಿಕ್ ನಗರಗಳನ್ನು ಪಟ್ಟಿ ಮಾಡಿದೆ. ಅದರ ಪ್ರಕಾರ ಬೆಂಗಳೂರು ನಂಬರ್ 1 ಪೊಸಿಷನ್ನಲ್ಲಿ ಇದೆ.
ಬೆಂಗಳೂರು: ಉದ್ಯಾನನಗರಿ ಖ್ಯಾತಿಯ ಬೆಂಗಳೂರು ಈಗ ಟ್ರಾಫಿಕ್ ನಗರವಾಗಿ ಬದಲಾಗಿದೆ. ಇಲ್ಲಿನ ಜನಸಂಖ್ಯೆ 1.36 ಕೋಟಿ. ಇಲ್ಲಿನ ವಾಹನ ಸವಾರರು ವರ್ಷಕ್ಕೆ 243 ಗಂಟೆ ಟ್ರಾಫಿಕ್ನಲ್ಲಿಯೇ ಸಮಯ ಕಳೆಯುತ್ತಾರೆ. ಅಂದರೆ, ಸುಮಾರು 10 ದಿನ. ದೇಶದಲ್ಲಿ ಮಾತ್ರವಲ್ಲ.. ಜಗತ್ತಿನಲ್ಲೇ ಈ ನಗರ ಟ್ರಾಫಿಕ್ ವಿಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.
ಮುಂಬೈ: ಈ ನಗರದ ಜನಸಂಖ್ಯೆ 2.12 ಕೋಟಿ. ದೇಶದ ಆರ್ಥಿಕ ರಾಜಧಾನಿ. ಇಲ್ಲಿ ವಲಸಿಗರ ಸಂಖ್ಯೆ ಹೆಚ್ಚು. ಪ್ರವಾಸಿಗರ ಸಂಖ್ಯೆಯೂ ಹೆಚ್ಚು.
ದೆಹಲಿ: ಈ ನಗರದ ಜನಸಂಖ್ಯೆ 3.29 ಕೋಟಿ. ವಾಹನಗಳ ಸಂಖ್ಯೆ ಜನಸಂಖ್ಯೆಗಿಂತಲೂ ಹೆಚ್ಚಿದೆ. ಇಲ್ಲಿ ಟ್ರಾಫಿಕ್ ಜೊತೆಗೆ ವಾಯು ಮಾಲೀನ್ಯವೂ ಹೆಚ್ಚು.
ಕೊಲ್ಕೊತಾ: ಈ ನಗರದ ಜನಸಂಖ್ಯೆ 1.53 ಕೋಟಿ.ವಾಹನಗಳ ಸಂಖ್ಯೆ ಜನಸಂಖ್ಯೆಗಿಂತಲೂ ಹೆಚ್ಚಿದೆ. ಹಳೆ ನಗರವಾದ ಕಾರಣ ರಸ್ತೆಗಳು ವಿಶಾಲವಾಗಿಲ್ಲ. ಟ್ರಾಫಿಕ್ ಪ್ರಮಾಣ ಕೂಡ ಜಾಸ್ತಿ.
ಪುಣೆ: ಈ ನಗರದ ಜನಸಂಖ್ಯೆ 1.04 ಕೋಟಿ. ಉದ್ಯಮಗಳು ಹೆಚ್ಚಿರುವ ಕಾರಣ ಉದ್ಯೋಗಿಗಳ ಸಂಖ್ಯೆ ಹೆಚ್ಚು.ಆಫೀಸ್ಗೆ ತೆರಳುವವರು ಟ್ರಾಫಿಕ್ ಸಮಸ್ಯೆ ಜೊತೆವೆ ವಾಯು ಮಾಲೀನ್ಯದ ಸಮಸ್ಯೆಯಿಂದ ಬಳಲುತ್ತಾರೆ.
ಹೈದರಾಬಾದ್: ಈ ನಗರದ ಜನಸಂಖ್ಯೆ 1.08 ಕೋಟಿ. ಐತಿಹಾಸಿಕ ನಗರವಿಂದು ಗ್ಲೋಬಲ್ ಸಿಟಿಯಾಗಿ ಬದಲಾಗಿದೆ. ಬೆಳಗ್ಗೆ, ಸಂಜೆ ಟ್ರಾಫಿಕ್ ಹೆಚ್ಚಿರುತ್ತದೆ.
ಚೆನ್ನೈ: ಈ ನಗರದ ಜನಸಂಖ್ಯೆ 64 ಲಕ್ಷ.. ಮೆಟ್ರೋ ಸಿಟಿಯಾದ ಕಾರಣ ದೇಶ ವಿದೇಶಗಳ ಜನ ಬಂದು ಹೋಗುತ್ತಾರೆ. ಇದರಿಂದ ಸಹಜವಾಗಿಯೇ ಟ್ರಾಫಿಕ್ ಹೆಚ್ಚಿರುತ್ತದೆ.
ಅಹ್ಮದಾಬಾದ್: ಈ ನಗರದ ಜನಸಂಖ್ಯೆ 26 ಲಕ್ಷ.. ರಸ್ತೆ ಟ್ರಾಫಿಕ್ ನಿಯಮಗಳು ಸರಿಯಾಗಿಲ್ಲ ಎನ್ನುವ ಆರೋಪಗಳಿವೆ. ಹೀಗಾಗಿ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚು.
ಸೂರತ್: ಜವಳಿ ಉದ್ಯಮದ ನಗರ. 80 ಲಕ್ಷ ಜನಸಂಖ್ಯೆ ಹೊಂದಿದೆ. ವಾಹನ ಸಂಚಾರ ಹೆಚ್ಚಯ. ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆಗಳಿಲ್ಲ, ಟ್ರಾಫಿಕ್ ಸಮಸ್ಯೆ ಹೆಚ್ಚಿದೆ.
ಜೈಪುರ: ಸುಂದರ ನಗರಿ. 42 ಲಕ್ಷ ಜನಸಂಖ್ಯೆ ಇದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಬಂದು ಹೋಗುತ್ತಾರೆ. ವಾಹನ ಸಂಚಾರವೂ ಹೆಚ್ಚಿರುತ್ತದೆ.
ADVERTISEMENT
ADVERTISEMENT