ಟೊಮೆಟೋ ಬೆಲೆ 150 ರೂಪಾಯಿಗಿಂತ ಕಡಿಮೆಗೆ ಇಳಿಯುತ್ತಿಲ್ಲ.. ಟೊಮೆಟೋ ಖರೀದಿಸಲು ಜನಸಾಮಾನ್ಯರು ಹಿಂದೆ ಮುಂದೆ ನೋಡುವಂತಾಗಿದೆ.
ಉತ್ತರಪ್ರದೇಶದ ವಾರಣಾಸಿಯಲ್ಲಿ ಅಜಯ್ ಫೌಜಿ ಎಂಬ ತರಕಾರಿ ವ್ಯಾಪಾರಿಯೊಬ್ಬ ಟೊಮೆಟೋ ಕಳುವಾಗೋದನ್ನು ತಡೆಯೋ ಸಲುವಾಗಿ ಇಬ್ಬರು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾನೆ.
ಟೊಮೆಟೋ ದರ ಹೆಚ್ಚಿದೆ.. ತನ್ನ ಅಂಗಡಿಗೆ ಬರುವ ಗ್ರಾಹಕರ ಪೈಕಿ ಕೆಲವರು ಟೊಮೆಟೋ ಕಳುವು ಮಾಡುತ್ತಿದ್ದಾರೆ. ಮುಟ್ಟಿ ನೋಡುವ ನೆಪದಲ್ಲಿ ಸದ್ದಿಲ್ಲದೇ ಬ್ಯಾಗ್‌ಗೆ ಇಳಿಸುತ್ತಿದ್ದಾರೆ..
ಅಂತಹ ಗ್ರಾಹಕರಿಂದ ತಮ್ಮ ಅಂಗಡಿಯಲ್ಲಿರುವ ಟೊಮೆಟೋ ರಕ್ಷಿಸಿಕೊಳ್ಳಲು ಹೀಗೆ ಮಾಡಿರುವುದಾಗಿ ವ್ಯಾಪಾರಿ ಅಜಯ್ ಫೌಜಿ ತಿಳಿಸಿದ್ದಾರೆ.
ಸದ್ಯ ಕೆಜಿ ಟೊಮೆಟೋಗಳನ್ನು 160 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದೇವೆ. ಆದರೆ, ದರ ಹೆಚ್ಚಿರುವ ಕಾರಣ ಜನ 50 ಗ್ರಾಂ ಟೊಮೆಟೋ ಕೊಟಿ.. 100 ಗ್ರಾಂ ಟೊಮೆಟೋ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಅಜಯ್ ಫೌಜಿ ಹೇಳುತ್ತಾರೆ.
ಐದು ದಿನಗಳ ಹಿಂದಷ್ಟೇ ಬೇಲೂರಿನ ರೈತ ಧರಣಿ ಎನ್ನುವವರು ಬೆಳೆದಿದ್ದ ಟೊಮೆಟೋಗಳನ್ನು ರಾತ್ರೋರಾತ್ರಿ ಕಳ್ಳರು ಕದ್ದೊಯ್ದಿದ್ದರು. ಅಂದಾಜು 90 ಬಾಕ್ಸ್ ಟೊಮೆಟೋ ಕಳುವಾಗಿತ್ತು.
ADVERTISEMENT
ADVERTISEMENT