ಕರ್ನಾಟಕಕ್ಕೆ (Karnataka) ಅಕ್ಕಿಯನ್ನು ಕೊಡಲು ಒಪ್ಪದೇ ಮುಕ್ತ ಮಾರುಕಟ್ಟೆಯಲ್ಲಿ (Open Market) ಹರಾಜಿಗಿಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದ ನಿರ್ಧಾರಕ್ಕೆ ಮುಖಭಂಗವಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ ಭಾರತೀಯ ಆಹಾರ ನಿಗಮದಿಂದ (Food Corporation of India) ಅಕ್ಕಿ ಖರೀದಿಗೆ ಯಾರೂ ಮುಂದೆ ಬಂದಿಲ್ಲ. ಖಾಸಗಿ ವ್ಯಾಪಾರಸ್ಥರಿಗೆ ಅಕ್ಕಿ ಮಾರಾಟ ಮಾಡುವ ಮೋದಿ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಜುಲೈ 5ರಂದು ಭಾರತೀಯ ಆಹಾರ ನಿಗಮ 3 ಲಕ್ಷದ 86 ಸಾವಿರ ಮೆಟ್ರಿಕ್ ಟನ್ನ್ನಷ್ಟು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಖರೀದಿದಾರರಿಗೆ ಹರಾಜಿಗಿಟ್ಟಿತ್ತು.
ಇದರಲ್ಲಿ ಪಂಜಾಬ್ ರಾಜ್ಯದ ಖಾಸಗಿ ಖರೀದಿದಾರರಿಗೆ 1 ಲಕ್ಷದ 50 ಸಾವಿರ ಮೆಟ್ರಿಕ್ ಟನ್, ತಮಿಳುನಾಡಿಗೆ 49 ಸಾವಿರ ಮೆಟ್ರಿಕ್ ಟನ್ ಮತ್ತು ಕರ್ನಾಟಕದ ಖಾಸಗಿ ಖರೀದಿದಾರರಿಗೆ 33 ಸಾವಿರ ಮೆಟ್ರಿಕ್ ಟನ್ನ್ನಷ್ಟು ಅಕ್ಕಿಯನ್ನು ಹರಾಜಿನಲ್ಲಿ ಖರೀದಿಸಲು ಅವಕಾಶ ನೀಡಲಾಗಿತ್ತು.
ಆದರೆ ಆಹಾರ ನಿಗಮ ಹರಾಜು ಆಹ್ವಾನಿಸಿದ ಬಳಿಕ ಮಹಾರಾಷ್ಟ್ರದಿಂದ ಖಾಸಗಿ ಖರೀದಿದಾರರಿಂದ ಕೇವಲ 70 ಮೆಟ್ರಿಕ್ ಟನ್, ಗುಜರಾತ್ನಿಂದ ಕೇವಲ 50 ಮೆಟ್ರಿಕ್ ಟನ್ ಮತ್ತು ಕರ್ನಾಟಕದಿಂದ ಕೇವಲ 40 ಮೆಟ್ರಿಕ್ ಟನ್ ಖರೀದಿಗಷ್ಟೇ ಬಿಡ್ಡಿಂಗ್ ನಡೆದಿತ್ತು.
3 ಲಕ್ಷದ 86 ಸಾವಿರ ಮೆಟ್ರಿಕ್ ಟನ್ನ್ನಷ್ಟು ಅಕ್ಕಿಯನ್ನು ಖಾಸಗಿಯವರಿಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಆಹಾರ ನಿಗಮ ಹರಾಜು ಕರೆದಿದ್ದರೂ ಬಿಡ್ಡಿಂಗ್ ಆಗಿದ್ದು ಕೇವಲ 170 ಮೆಟ್ರಿಕ್ ಟನ್ಗಷ್ಟೇ.
16 ರಾಜ್ಯಗಳಲ್ಲಿನ ವ್ಯಾಪಾರಸ್ಥರು ಅಕ್ಕಿ ಖರೀದಿಗೆ ಬಿಡ್ಡಿಂಗ್ನಲ್ಲೇ ಪಾಲ್ಗೊಂಡೇ ಇಲ್ಲ.
ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರ ಆಹಾರ ನಿಗಮದಿಂದ ಅಕ್ಕಿ ಖರೀದಿಸುವ ವೇಳೆ ನಿಗಮ ಅಕ್ಕಿ ಪೂರೈಕೆಗೆ ಆರಂಭದಲ್ಲಿ ನಿರ್ಧರಿಸಿದ ಬೆಲೆ ಪ್ರತಿ ಕೆಜಿ 34 ರೂಪಾಯಿ ಸಾಗಾಣಿಕೆ ವೆಚ್ಚ ಹೊರತುಪಡಿಸಿ.
ಆದರೆ ಖಾಸಗಿಯವರಿಗೆ ನಿಗಮ ಹರಾಜು ಘೋಷಿಸಿದ ಬಳಿಕ ಅಕ್ಕಿ ಬಿಡ್ಡಿಂಗ್ ಆದ ಬೆಲೆ 31 ರೂಪಾಯಿ 75 ಪೈಸೆ. ಆಹಾರ ನಿಗಮ ಹರಾಜಿಗೆ ನಿಗದಿಪಡಿಸಿರುವ ಬೆಲೆ ಪ್ರತಿ ಕೆಜಿಗೆ 31 ರೂಪಾಯಿ 73 ಪೈಸೆ. ಅಂದರೆ ಖಾಸಗಿ ಬಿಡ್ಡಿಂಗ್ದಾರರು ಪ್ರತಿ ಕೆಜಿಗೆ 2 ಪೈಸೆಯಷ್ಟು ಮಾತ್ರ ಹೆಚ್ಚು ಬಿಡ್ಡಿಂಗ್ ಮಾಡಿದ್ದಾರೆ.
ADVERTISEMENT
ADVERTISEMENT