ಲೋಕಸಭಾ ಚುನಾವಣಾ ರಣಕಣದ ನಡುವೆಯೇ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಆಘಾತ ನೀಡಿದೆ. ಕರ್ನಾಟಕದ ಪ್ರಮುಖ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಪ್ರಿಲ್ 1ರಿಂದ ಟೋಲ್ ದರ ಹೆಚ್ಚಳ ಆಗಲಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ:
ಬೆಂಗಳೂರು-ನಿಡಘಟ್ಟವರೆಗೆ 53 ಕಿಲೋ ಮೀಟರ್ ದೂರ ಎಕ್ಸ್ಪ್ರೆಸ್ ವೇನಲ್ಲಿ ಪ್ರಯಾಣಿಸುವವರಿಗೆ ಶೇಕಡಾ 3ರಷ್ಟು ಟೋಲ್ ಹೆಚ್ಚಳವಾಗಿದೆ.
ಕಾರು, ವ್ಯಾನ್ ಮತ್ತು ಜೀಪ್ಗಳಿಗೆ ಏಪ್ರಿಲ್ 1ರಿಂದ 170 ರೂಪಾಯಿ ಟೋಲ್ ಪಾವತಿಸಬೇಕಾಗುತ್ತದೆ. ದ್ವಿಮುಖ ಸಂಚಾರಕ್ಕೆ 255 ರೂಪಾಯಿ ಟೋಲ್ ಕೊಡಬೇಕಾಗುತ್ತದೆ.
ಲಘು ವಾಣಿಜ್ಯ ವಾಹನಗಳಿಗೆ ಏಕಮುಖ ಸಂಚಾರಕ್ಕೆ 275 ರೂಪಾಯಿ, ದ್ವಿಮುಖ ಸಂಚಾರಕ್ಕೆ 415 ರೂಪಾಯಿ ಕೊಡಬೇಕಾಗುತ್ತದೆ. ಟ್ರಕ್ ಮತ್ತು ಬಸ್ಗಳು ಏಕಮುಖ ಸಂಚಾರಕ್ಕೆ 580 ರೂಪಾಯಿ ಮತ್ತು ದ್ವಿಮುಖ ಸಂಚಾರಕ್ಕೆ 565 ರೂಪಾಯಿ ಕೊಡಬೇಕಾಗುತ್ತದೆ.
ನಿಡಘಟ್ಟದಿಂದ ಮೈಸೂರುವರೆಗೆ ಕಾರು, ವ್ಯಾನ್, ಜೀಪ್ಗಳು ಏಕಮುಖ ಸಂಚಾರಕ್ಕೆ 160 ರೂಪಾಯಿ ಮತ್ತು ದ್ವಿಮುಖ ಸಂಚಾರಕ್ಕೆ 240 ರೂಪಾಯಿ ಕೊಡಬೇಕಾಗುತ್ತದೆ.
ದೊಡ್ಡಬಳ್ಳಾಪುರ-ಹೊಸಕೋಟೆ ಹೆದ್ದಾರಿ:
ದೊಡ್ಡಬಳ್ಳಾಪುರ ಬೈಪಾಸ್-ಹೊಸಕೋಟೆವರೆಗೆ ಏಪ್ರಿಲ್ 1ರಿಂದ ಕಾರು, ವ್ಯಾನ್, ಜೀಪ್ಗಳು ಏಕಮುಖ ಸಂಚಾರಕ್ಕೆ 80 ರೂಪಾಯಿ ಮತ್ತು ದ್ವಿಮುಖ ಸಂಚಾರಕ್ಕೆ 120 ರೂಪಾಯಿ ಕೊಡಬೇಕಾಗುತ್ತದೆ.
ಲಘು ವಾಣಿಜ್ಯ ವಾಹನಗಳು ಏಕಮುಖ ಸಂಚಾರಕ್ಕೆ 130 ರೂಪಾಯಿ ಮತ್ತು ದ್ವಿಮುಖ ಸಂಚಾರಕ್ಕೆ 200 ರೂಪಾಯಿ, ಟ್ರಕ್ ಮತ್ತು ಬಸ್ಗಳು ಏಕಮುಖ ಸಂಚಾರಕ್ಕೆ 275 ಮತ್ತು ದ್ವಿಮುಖ ಸಂಚಾರಕ್ಕೆ 415 ರೂಪಾಯಿ ಕೊಡಬೇಕಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ 7:
ಕರ್ನಾಟಕ-ಆಂಧ್ರ ಗಡಿಭಾಗ-ದೇವನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ
ಕಾರು, ವ್ಯಾನ್, ಜೀಪ್ಗಳು ಏಕಮುಖ ಸಂಚಾರಕ್ಕೆ 115 ರೂಪಾಯಿ ಮತ್ತು ದ್ವಿಮುಖ ಸಂಚಾರಕ್ಕೆ 175 ರೂಪಾಯಿ ಕೊಡಬೇಕಾಗುತ್ತದೆ.