Chandra Grahan; ಇಂದೇ ಚಂದ್ರಗ್ರಹಣ.. ಎಲ್ಲೆಲ್ಲಿ ಕಾಣಿಸುತ್ತೆ..?

ಖಗೋಳದಲ್ಲಿ ಇಂದು ಮತ್ತೊಂದು ಅದ್ಭುತ ಅವಿಷ್ಕಾರಗೊಳ್ಳಲಿದೆ. ಪೆನುಂಬ್ಲಾರ್ ಲೂನಾರ್ ಎಂದು ಕರೆಯಲ್ಪಡುವ ಚಂದ್ರಗ್ರಹಣ ಏರ್ಪಡಲಿದೆ.

ಭಾರತೀಯ ಕಾಲಮಾನ ಪ್ರಕಾರ ಇಂದು ರಾತ್ರಿ 8.42ರಿಂದ ನಡುರಾತ್ರಿ 1.04 ಗಂಟೆಯವರೆಗೂ ಚಂದ್ರಗ್ರಹಣ ಇರಲಿದೆ.

ಆದರೆ, ಇದು ಭಾರತದಲ್ಲಿ ಗೋಚರ ಆಗುವುದಿಲ್ಲ.. ಬದಲಿಗೆ ಆಫ್ರಿಕಾ, ಆಸ್ಟ್ರೇಲಿಯಾ,ಅಟ್ಲಾಂಟಿಕ್ ನಂತಹ ಪ್ರಾಂತ್ಯಗಳಲ್ಲಿ ಕಂಡುಬರುತ್ತದೆ.

ಭಾರತದಲ್ಲಿ ಇದರ ಪ್ರಭಾವ ಇರಲ್ಲ.. ಭಾರತದ ಮೇಲೆ ಇದರ ಪ್ರಭಾವ ಇರುತ್ತದೆ ಎಂಬ ವದಂತಿಗಳನ್ನು ನಂಬಬಾರದು ಎಂದು ಖಗೋಳ ಪರಿಣಿತರು ಸ್ಪಷ್ಟಪಡಿಸಿದ್ದಾರೆ.

ಮುಖ್ಯವಾಗಿ ಹುಟ್ಟುವ ಮಕ್ಕಳ ಮೇಲೆ ಗ್ರಹಣಕ್ಕೆ ಸಂಬಂಧಿಸಿದ ಹಾನಿಕಾರಕ ಪ್ರಭಾವಗಳು ಇರುತ್ತವೆ ಎಂಬ ಸುಳ್ಳು ಪ್ರಚಾರಗಳನ್ನು ನಂಬಬಾರದು ಎಂದು ಕರೆ ನೀಡಿದ್ದಾರೆ.