ಬೆಂಗಳೂರು-ಮೈಸೂರು ಟೋಲ್​ ಪರಿಣಾಮ: ಕೆಎಸ್​ಆರ್​ಟಿಸಿ ಬಸ್​ಗಳ ಟಿಕೆಟ್​ ದರ ಹೆಚ್ಚಳ

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಟೋಲ್​ ಸಂಗ್ರಹದಿಂದ ಆಗಲಿರುವ ಹೊರೆಯನ್ನು ರಾಜ್ಯ ಸರ್ಕಾರ ಈಗ ನೇರವಾಗಿ ಪ್ರಯಾಣಿಕರ ಮೇಲೆ ವರ್ಗಾಯಿಸಿದೆ.

ಬೆಂಗಳೂರು-ಮೈಸೂರು ನಡುವಿನ ಮಾರ್ಗದಲ್ಲಿ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್​ಗಳ ಟಿಕೆಟ್​ ದರ ಹೆಚ್ಚಳವಾಗಿದೆ.

ಕರ್ನಾಟಕ ಸಾಮಾನ್ಯ ಸಾರಿಗೆ ಬಸ್​ನಲ್ಲಿ ಪ್ರಯಾಣದ ಟಿಕೆಟ್​ ದರ 15 ರೂಪಾಯಿ ಹೆಚ್ಚಳವಾಗಿದೆ. ರಾಜಹಂಸ ಟಿಕೆಟ್​ ದರ 20 ರೂಪಾಯಿ ಮತ್ತು ಮಲ್ಟಿ ಎಕ್ಸೆಲ್​ ವಾಹನಗಳ ಟಿಕೆಟ್​ ದರ 25 ರೂಪಾಯಿ ಹೆಚ್ಚಳವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್​ಪ್ರೆಸ್​ವೇನಲ್ಲಿ ಟೋಲ್​ ಸಂಗ್ರಹ ಆರಂಭಿಸಿರುವ ಕಾರಣ ಹೊರೆ ನಿಭಾಯಿಸಲು ಟಿಕೆಟ್​ ದರ ಹೆಚ್ಚಳ ಮಾಡಿದ್ದಾಗಿಯೂ, ಎಲ್ಲ ಟೋಲ್​ ಪ್ಲಾಜಾಗಳಲ್ಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ ಎಂದೂ ಕೆಎಸ್​ಆರ್​ಟಿಸಿ ಹೇಳಿದೆ.

LEAVE A REPLY

Please enter your comment!
Please enter your name here