ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿರುವ 6 ಮಾರ್ಗಗಳ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ನಾಳೆಯಿಂದ ಟೋಲ್ ಸಂಗ್ರಹ ಆರಂಭ ಆಗಲಿದೆ.
ನಾಳೆ ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹ ಶುರುವಾಗಲಿದೆ.
ಬೆಂಗಳೂರು-ನಿಡಘಟ್ಟ ನಡುವಿನ ಮಾರ್ಗದಲ್ಲೇ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ.
ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಆರಂಭವಾಗಲಿದೆ.
ಫೆಬ್ರವರಿ 28ರಿಂದಲೇ ಟೋಲ್ ಸಂಗ್ರಹ ಆರಂಭ ಆಗ್ಬೇಕಿತ್ತು. ಆದರೆ ಪ್ರಧಾನಿ ಮೋದಿಯವರು ಎಕ್ಸ್ಪ್ರೆಸ್ ವೇ ಉದ್ಘಾಟಿಸಲಿದ್ದ ಕಾರಣ ಟೋಲ್ ಸಂಗ್ರಹವನ್ನು ಮಾರ್ಚ್ 14 (ಅಂದರೆ ನಾಳೆಗೆ) ಮುಂದೂಡಲಾಗಿತ್ತು.
118 ಕಿಮೀ ವ್ಯಾಪ್ತಿಯ ಎಕ್ಸ್ಪ್ರೆಸ್ವೇಯ ಕಾಮಗಾರಿ ಇನ್ನು ಅರ್ಧದಷ್ಟು ಬಾಕಿ ಇದೆ. ಸರ್ವಿಸ್ ರಸ್ತೆಗಳೂ ಇನ್ನೂ ಪೂರ್ಣಗೊಂಡಿಲ್ಲ. ಹೀಗಿದ್ದರೂ ಟೋಲ್ ಸಂಗ್ರಹ ಆರಂಭಿಸುತ್ತಿರುವುದು ಟೀಕೆಗೆ ಕಾರಣವಾಗಿದೆ.
ಕಾರು, ಜೀಪು, ವ್ಯಾನು – ಏಕಮುಖ ಸಂಚಾರಕ್ಕೆ 135ರೂ. ಅದೇ ದಿನ ಮರು ಸಂಚಾರಕ್ಕೆ 205 ರೂ.
ಸ್ಥಳೀಯ ವಾಹನಗಳಿಗೆ 70 ರೂಪಾಯಿ – ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ಗೆ 4,525 ರೂಪಾಯಿ
ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್ – ಏಕಮುಖ ಸಂಚಾರಕ್ಕೆ 220 ರೂ. ಅದೇ ದಿನ ಮರು ಸಂಚಾರಕ್ಕೆ 320 ರೂ.
ಸ್ಥಳೀಯ ವಾಹನಗಳಿಗೆ 110 ರೂಪಾಯಿ – ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 7,315 ರೂಪಾಯಿ
ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್) – ಏಕಮುಖ ಸಂಚಾರಕ್ಕೆ 460 ರೂಪಾಯಿ – ಅದೇ ದಿನ ಮರು ಸಂಚಾರಕ್ಕೆ 690 ರೂಪಾಯಿ
ಸ್ಥಳೀಯ ವಾಹನಗಳಿಗೆ 230 ರೂಪಾಯಿ – ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ಗೆ 15,325 ರೂಪಾಯಿ.
ವಾಣಿಜ್ಯ ವಾಹನಗಳು (ಮೂರು ಆಕ್ಸೆಲ್) – ಏಕಮುಖ ಸಂಚಾರಕ್ಕೆ 500 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 750 ರೂಪಾಯಿ.
ಸ್ಥಳೀಯ ವಾಹನಗಳಿಗೆ 250 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 16,715 ರೂಪಾಯಿ
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಯಂತ್ರ, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್) – ಏಕಮುಖ ಸಂಚಾರಕ್ಕೆ 720 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 1080 ರೂಪಾಯಿ
ಸ್ಥಳೀಯ ವಾಹನಗಳಿಗೆ 360 ರೂಪಾಯಿ – ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 24,030 ರೂಪಾಯಿ
ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)- ಏಕಮುಖ ಸಂಚಾರಕ್ಕೆ 880 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 1,315 ರೂಪಾಯಿ.
ಸ್ಥಳೀಯ ವಾಹನಗಳಿಗೆ 440 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ಗೆ 29,255ರೂ ದರ
ADVERTISEMENT
ADVERTISEMENT