ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ತಿರುಪತಿ ತಿರುಮಲದಲ್ಲಿ ಶ್ರೀವಾರಿ ದೇವಾಲಯವನ್ನು ಬೆಳಗ್ಗೆ 8.12ಕ್ಕೆ ಸರಿಯಾಗಿ ಬಂದ್ ಮಾಡಲಾಗಿದೆ. ಸಂಜೆ 7.30ರವರೆಗೂ ದೇಗುಲವನ್ನು ತೆರೆಯಲ್ಲ. ಈ ಅವಧಿಯಲ್ಲಿ ಎಲ್ಲಾ ರೀತಿಯ ಪ್ರತ್ಯೇಕ ದರ್ಶನಗಳನ್ನು ಟಿ ಟಿ ಡಿ ರದ್ದು ಮಾಡಿದೆ.
ದೇಗುಲ ಶುದ್ದಿಕರಣ, ಸಂಪ್ರೂಕ್ಷಣೆ ಬಳಿಕ ತಿರುಪತಿ ತಿಮ್ಮಪ್ಪನ ದೇವಾಲಯದ ಬಾಗಿಲನ್ನು ಮತ್ತೆ ಭಕ್ತರಿಗೆ ತೆರೆಯಲಾಗುತ್ತದೆ.
ಸಂಜೆ 5.02ಕ್ಕೆ ಗ್ರಹಣ ಕಾಲ ಆರಂಭ ಆಗಲಿದ್ದು, ಸಂಜೆ 6.27ಕ್ಕೆ ಗ್ರಹಣ ಮೋಕ್ಷ ಆಗಲಿದೆ. ಗ್ರಹಣದ ಮಧ್ಯಕಾಲ ಸಂಜೆ 5.49 ನಿಮಿಷ.