ADVERTISEMENT
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ 444 ರನ್ಗಳ ಗುರಿ ನೀಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 469 ರನ್ ಗಳಿಸಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 270 ರನ್ಗೆ ಡಿಕ್ಲೇರ್ ಮಾಡಿಕೊಂಡಿದೆ.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ಗೆ ಆಲೌಟಾಗಿತ್ತು.
ಆಸ್ಟ್ರೇಲಿಯಾ ಪರ ಅಲೆಕ್ಸ್ ಕೆರಿ 66, ಮಿಚೆಲ್ ಸ್ಟಾರ್ಕ್ 41, ಸ್ಟೀವ್ ಸ್ಮಿತ್ 34 ಮತ್ತು ಮಾರ್ನಸ್ ಲಬುಸ್ಚಾಗ್ನೆ 41 ರನ್ ಗಳಿಸಿದರು.
ಭಾರತದ ಮೊಹಮ್ಮದ್ ಶಮಿ 2, ಸಿರಾಜ್ 2,, ಉಮೇಶ್ ಯಾದವ್ 2, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು.
ADVERTISEMENT