ಗ್ಯಾರಂಟಿ ಭರವಸೆಗಳ ನೆರಳು ನೆರೆಯ ರಾಜ್ಯಗಳಿಗೂ ವ್ಯಾಪಿಸಿದೆ. ಆಂಧ್ರ ಪ್ರದೇಶದಲ್ಲಿ ತೆಲುಗುದೇಶಂ ಪಕ್ಷ ಭವಿಷ್ಯಕ್ಕೆ ಗ್ಯಾರಂಟಿ ಹೆಸರಲ್ಲಿ ಮೊದಲ ಹಂತದ ಚುನಾವಣಾ ಪ್ರಣಾಳಿಕೆ ಪ್ರಕಟಿಸಿದೆ. ಭರವಸೆಗಳ ಮಹಾಪೂರವನ್ನೇ ಹರಿಸಿದೆ.
ಎಲ್ಲಾ ಮಹಿಳೆಯರಿಗೂ ಪ್ರತಿ ತಿಂಗಳೂ 1500 ರೂ.
18 ವರ್ಷದಿಂದ 59 ವರ್ಷದವರೆಗಿನ ಎಲ್ಲಾ ಮಳೆಯರ ಖಾತೆಗಳಿಗೆ ಪ್ರತಿ ತಿಂಗಳು 1500 ರೂ. ಜಮೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಣೆ ಮಾಡಿದ್ದಾರೆ. ಇದು ಮನೆಯಲ್ಲಿರುವ ಎಲ್ಲಾ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಮಕ್ಕಳ ಶಿಕ್ಷಣಕ್ಕೆ ಪ್ರತಿವರ್ಷ 15,000 ರೂ.
ತಾಯಿಗೆ ವಂದನೆ ಹೆಸರಲ್ಲಿ ಪ್ರತಿ ಮಗುವಿನ ಶಿಕ್ಷಣಕ್ಕೆ ಪ್ರತಿ ವರ್ಷ ೧೫ ಸಾವಿರ ಕೊಡುತ್ತೇವೆ. ಮನೆಯಲ್ಲಿ ಎಷ್ಟೇ ಮಕ್ಕಳು ಇರಲಿ ಅವರಿಗೆಲ್ಲಾ ಈ ಯೋಜನೆ ಅನ್ವಯವಾಗುತ್ತದೆ ಎಂದು ಚಂದ್ರಬಾಬು ನಾಯ್ಡು ಪ್ರಕಟಿಸಿದ್ದಾರೆ.
ಪ್ರತಿವರ್ಷ 3 ಸಿಲಿಂಡರ್ ಉಚಿತ
ಪ್ರತಿ ವರ್ಷ ಮೂರು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡುವ ಭರವಸೆಯನ್ನು ಟಿಡಿಪಿ ನೀಡಿದೆ.
ಮಹಿಳೆಯರಿಗೆ ಉಚಿತ ಸಂಚಾರ
ಎಪಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪಯಣಕ್ಕೆ ಅವಕಾಶ – ಜಿಲ್ಲಾ ವ್ಯಾಪ್ತಿಗೆ ಮಾತ್ರ ಈ ಯೋಜನೆ ಅನ್ವಯ ಆಗಲಿದೆ ಎಂಬ ಷರತ್ತು ವಿಧಿಸಲಾಗಿದೆ.
ನಿರುದ್ಯೋಗಿಗಳಿಗೆ ಪ್ರತಿತಿಂಗಳು 3,000 ರೂ.
ಯುವಗಳಂ ನಿಧಿ ಹೆಸರಿನಲ್ಲಿ ಪ್ರತಿ ನಿರುದ್ಯೋಗಿಗೆ ಪ್ರತಿ ತಿಂಗಳು ೩ಸಾವಿರ ರೂಪಾಯಿ ಕೊಡುತ್ತೇವೆ. ಉದ್ಯೋಗ ಸೃಷ್ಟಿಸುತ್ತೇವೆ ಎಂದು ತೆಲುಗುದೇಶಂ ಪಾರ್ಟಿ ಘೋಷಣೆ ಮಾಡಿದೆ.
ರೈತರಿಗೆ ಪ್ರತಿವರ್ಷ 20,000 ರೂ.
ರೈತರಿಗೆ ಪ್ರತಿ ವರ್ಷ ೨೦ಸಾವಿರ ನೀಡುವ ಭರವಸೆಯನ್ನು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗೆ ಸ್ಪರ್ಧೆ;ನಿಯಮ ಬದಲಾವಣೆ ಭರವಸೆ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಇರುವ ನಿಯಮವನ್ನು ತಿದ್ದುಪಡಿ ಮಾಡುತ್ತೇವೆ ಎಂದು ಟಿಡಿಪಿ ತಿಳಿಸಿದೆ. ಸದ್ಯ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೇ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ.