ಇದು ಟೆಕ್ನಾಲಜಿ ಜಗತ್ತು. ಪ್ರತಿ ದಿನವೂ ಈ ಟೆಕ್ ವರ್ಲ್ಡ್ನಲ್ಲಿ ಹೊಸ ಹೊಸ ಆವಿಷ್ಕಾರ ನಡೆಯುತ್ತಿರುತ್ತದೆ. ಇದಕ್ಕೆ ಮನುಷ್ಯ ಹೊಂದಿಕೊಂಡಂತೆಲ್ಲಾ ಅವನ ದೈನಂದಿನ ಜೀವನ ಇಂದಿನ ಜಗತ್ತಿನಲ್ಲಿ ಸುಲಭವೇ ಆಗಲಿದೆ. ಇಂದು ಅಂತಹ ಒಂದು ಉಪಯುಕ್ತ ಟೆಕ್ ಟ್ರಿಕ್ಸ್ ಅನ್ನು ಇಲ್ಲಿ ತಿಳಿಸಿದ್ದೇವೆ.
ನೀವು ಯಾವಾಗಲಾದರೂ ಯಾರಿಗಾದರೂ ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಇತರೆ ಯುಪಿಐ ಪೇಮೆಂಟ್ ಸೇವೆಗಳ ಮೂಲಕ ಹಣ ಕಳುಹಿಸುತ್ತಿರುವ ಸಂದರ್ಭದಲ್ಲಿ ಇಂಟರ್ನೆಟ್ ಸಮಸ್ಯೆ ಎದುರಾಗಿರಬಹುದು. ಈ ಕಾರಣದಿಂದ ನಿಮ್ಮ ಪೇಮೆಂಟ್ ಸಹ ಸಕ್ಸಸ್ಫುಲ್ ಆಗಿರುವುದಿಲ್ಲ. ಇಂತಹ ಸಂದರ್ಭ ನೀವು ಎದುರಿಸಿದ್ದಲ್ಲಿ, ಇನ್ನುಮುಂದೆ *99# USSD (Unstructured Supplementary Service Data) ಸೇವೆ ಬಳಸಿ. ಇದರ ಮೂಲಕ ಯಾವುದೇ ಇಂಟರ್ನೆಟ್ ಸಹಾಯವಿಲ್ಲದೆ ಹಣ ಸ್ವೀಕರಿಸಿ, ಹಣ ಮತ್ತೊಬ್ಬರಿಗೆ ಪಾವತಿಸಿ. ಅಲ್ಲದೇ ನಿಮ್ಮ ಖಾತೆಯಲ್ಲಿನ ಹಣ ಚೆಕ್ ಮಾಡಿಕೊಳ್ಳಿ.
ಹೌದು *99# ಸೇವೆಯು ಬ್ಯಾಂಕಿಂಗ್ ಸೇವೆಗಳನ್ನು ಎಲ್ಲರಿಗೂ ದೇಶದಾದ್ಯಂತ ನೀಡಿದ್ದು, 83 ಲೀಡಿಂಗ್ ಬ್ಯಾಂಕ್ಗಳು, 4 ಟೆಲಿಕಾಂ ಸೇವೆಗಳು ಈ ಸೇವೆ ಆಫರ್ ಮಾಡಿದೆ. ಹಿಂದಿ, ಇಂಗ್ಲಿಷ್, ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಇದರ ಸೇವೆ ಪಡೆಯಬಹುದಾಗಿದ್ದು, ಈ *99# ಆಫ್ಲೈನ್ ಯುಪಿಐ ಪಿನ್ ಸೆಟ್ ಮಾಡುವುದು ಹೇಗೆ? ಇದರ ಸೇವೆ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಆಫ್ಲೈನ್ ಯುಪಿಐ ಪೇಮೆಂಟ್ ಸೆಟ್ ಮಾಡುವುದು ಹೇಗೆ?
– ಬ್ಯಾಂಕ್ ಖಾತೆಯೊಂದಿಗೆ ಸಂಯೋಜಿಸಿರುವ ಮೊಬೈಲ್ ನಂಬರ್ನಿಂದ ಮಾತ್ರವೇ *99# ಡಯಲ್ ಮಾಡಿ.
– ನಂತರ ನಿಮ್ಮ ಆಸಕ್ತ ಭಾಷೆ ಆಯ್ಕೆ ಮಾಡಿ, ಬ್ಯಾಂಕ್ ಹೆಸರು ಎಂಟರ್ ಮಾಡಿ.
– ನಿಮ್ಮ ಮೊಬೈಲ್ ನಂಬರ್ಗೆ ಲಿಂಕ್ ಆದ ಬ್ಯಾಂಕ್ ಖಾತೆಗಳ ಲಿಸ್ಟ್ ಪ್ರದರ್ಶಿತವಾಗುತ್ತವೆ.
– ಪೇಮೆಂಟ್ ಪ್ರೋಸೆಸ್ ಮಾಡಬೇಕಾದ ಖಾತೆ ಆಯ್ಕೆ ಮಾಡಿ.
– ನಂತರ ನಿಮ್ಮ ಆಯ್ಕೆಗಳನ್ನು ಕ್ಲಿಕ್ ಮಾಡಿ.
ನಂತರ ನಿಮ್ಮ ಡೆಬಿಟ್ ಕಾರ್ಡ್ ನ ಕೊನೆ 6 ಡಿಜಿಟ್ ನಂಬರ್ / ಕಾರ್ಡ್ ಎಕ್ಸ್ಪೈರಿ ದಿನಾಂಕ ನಮೂದಿಸಿ.
– ಇದನ್ನು ಒಮ್ಮೆ ಸೆಟ್ ಮಾಡಿದರೆ, ನಂತರ ಎಲ್ಲೇ ಇದ್ದರೂ, ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ನೀವು ಪೇಮೆಂಟ್ ಮಾಡಬಹುದು.
ಆಫ್ಲೈನ್ ಯುಪಿಐ ಪೇಮೆಂಟ್ ಮಾಡುವುದು ಹೇಗೆ?
– ನಿಮ್ಮ ಫೋನ್ ನಲ್ಲಿ *99# ಡಯಲ್ ಮಾಡಿ, ಹಣ ಕಳುಹಿಸಲು 1 ಎಂಟರ್ ಮಾಡಿ.
– ನಂತರ ನಿಮ್ಮ ಆಯ್ಕೆಗಳನ್ನು ಕ್ಲಿಕ್ ಮಾಡಿ.
– ಯಾರಿಗೆ ಹಣ ಕಳುಹಿಸಬೇಕೋ ಅವರ ಯುಪಿಐ ಐಡಿ / ಫೋನ್ ನಂಬರ್ / ಬ್ಯಾಂಕ್ ಖಾತೆ ನಂಬರ್ ನಮೂದಿಸಿ.
– ನಂತರ ಹಣ ಎಂಟರ್ ಮಾಡಿ, ಯುಪಿಐ ಪಿನ್ ನೀಡಿ.
– ಯಶಸ್ವಿಯಾಗಿ ನೀವು ಹಣ ಕಳುಹಿಸಿರುತ್ತೀರಿ. ಗರಿಷ್ಠ ಇದಕ್ಕೆ 50 ಪೈಸೆ ಕಡಿತವಾಗಬಹುದು ಅಷ್ಟೆ.
*99# ಸೇವೆಯ ಮೂಲಕ ಪ್ರಸ್ತುತ ಗರಿಷ್ಠ 5000 ವರೆಗೆ ಮಾತ್ರ ಪಾವತಿ ಮಾಡಬಹುದು ಮತ್ತು ಸ್ವೀಕರಿಸಬಹುದು.