ಆ ಸ್ವಾಮೀಜಿ & ಆ ಯುವತಿ ಮತ್ತು Facebook ಮೂಲಕ ಸಲುಗೆ..! – ಯಾರು ಆಕೆ..?

ಫೇಸ್​ಬುಕ್​ನಲ್ಲಿ ಪರಿಚಯಯವಾದ ಯುವತಿಯೊಂದಿಗೆ ಸಲುಗೆಯಿಂದ ಮಾತಾಡಿದ ಸ್ವಾಮೀಜಿಯೊಬ್ಬರು 37 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಹಲವು ಬಾರಿ ಸ್ವಾಮೀಜಿಗೆ ವೀಡಿಯೋ ಕರೆ ಮಾಡಿದ್ದ ಅ ಯುವತಿ ಎಂದಿಗೂ ಮುಖ ತೋರಿಸಿರಲಿಲ್ಲ. ಕೈ ಕಾಲುಗಳನ್ನು ಮಾತ್ರ ತೋರಿಸಿ ಸ್ವಾಮೀಜಿ ಜೊತೆ ಮಾತಾಡುತ್ತಿದ್ದಳು.
2020ರಲ್ಲಿ ಅಂದರೆ ಮೂರು ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಬಂದ ಯುವತಿಯ ಫ್ರೆಂಡ್​ ರಿಕ್ವೆಸ್ಟ್​ನ್ನು ಸ್ವೀಕರಿಸಿದ ಆ ಸ್ವಾಮೀಜಿ ಜೊತೆಗೆ ಆಕೆ ಚ್ಯಾಟಿಂಗ್ ಆರಂಭಿಸಿದ್ದಳು.
ಆಧ್ಯಾತ್ಮಿಕ ಆಸಕ್ತಿ ಹೊಂದಿದ್ದಾಗಿ ಹೇಳಿದ ಆಕೆ ಸ್ವಾಮೀಜಿ ಮೊಬೈಲ್​ ನಂಬರ್​ ತಗೊಂಡಿದ್ದಳು. ನಂತರ ಆಕೆಯೂ ಮೊಬೈಲ್​ ನಂಬರ್​ ಕೊಟ್ಟಿದ್ದಳು. 
ಮೊಬೈಲ್​ ನಂಬರ್​ ಸಿಕ್ಕ ಬಳಿಕ ವಾಟ್ಸಾಪ್​ನಲ್ಲೂ ಚ್ಯಾಟಿಂಗ್​ ಶುರು ಮಾಡಿದ್ದಳು. ಹಲವು ಬಾರಿ ವೀಡಿಯೋ ಕರೆಯನ್ನೂ ಮಾಡಿದ್ದಳು.
ಯುವತಿಯಿಂದ ಮೋಸ ಹೋಗಿರುವ ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರು ದಾಬಸ್​ಪೇಟೆ ಪೊಲೀಸ್​ ಠಾಣೆಯಲ್ಲಿ ಯುವತಿ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.
ಹೋಟೆಲ್​ ಮ್ಯಾನ್ಮೆಜ್​ಮೆಂಟ್​ ಕೋರ್ಸ್​ ಮಾಡುತ್ತಿರುವುದಾಗಿ ಹೇಳಿದ್ದ ಆ ಯುವತಿ ಸ್ವಾಮೀಜಿಯಿಂದ ಮೊದಲು 2 ಲಕ್ಷ ರೂಪಾಯಿ ಪಡೆದಿದ್ದಳು.
ನಾನು ಅನಾಥೆ, ಹೆಸರಲ್ಲಿ ಭೂಮಿಯನ್ನು ಮಠದ ಹೆಸರಿಗೆ ಬರೆಯುವುದಾಗಿ ಹೇಳಿ ಆ ಬಳಿಕ ಪದೇ ಪದೇ 32 ರೂಪಾಯಿವರೆಗೆ ಪಡೆದಿದ್ದಳು.
ಜಮೀನು ದಾಖಲೆ ತರುವಾಗ ನನ್ನ ಮೇಲೆ ಹಲ್ಲೆಯಾಗಿದೆ, ಎಂ ಎಸ್​ ರಾಮಯ್ಯ ಆಸ್ಪತ್ರೆಗೆ ದಾಖಲಾಗಿರುವುದಾಗಿಯೂ, ಬಿಲ್​ ಪಾವತಿಗೆ ಹಣ ನೀಡುವಂತೆಯೂ ಕೇಳಿದ್ದಳು. ಆದರೆ ಸ್ವಾಮೀಜಿ ಕಡೆಯವರು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಆಕೆ ಹೇಳಿದ್ದು ಸುಳ್ಳೆಂದು ಗೊತ್ತಾಯಿತು.
ಇದಾದ ಬಳಿಕ ಆಕೆಯ ಸ್ನೇಹಿತೆ ವರ್ಷಾ ಎಂಬವರು ಸ್ವಾಮೀಜಿಗೆ ಕರೆ ಮಾಡಿ 55 ಲಕ್ಷ ರೂಪಾಯಿ ಸಾಲ ಮಾಡಿ ವರ್ಷಾರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿದ್ದಾಗಿಯೂ ಹಣ ನೀಡದೇ ಇದ್ದರೆ ವರ್ಷಾ ಜೊತೆಗೆ ಸಲುಗೆಯಿಂದ ಇರುವ ವಿಷಯವನ್ನು ಬಹಿರಂಗಪಡಿಸುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಸ್ವಾಮೀಜಿ ದೂರಿನಲ್ಲಿ ಹೇಳಿದ್ದಾರೆ.
ತಾನು ಹಣ ವರ್ಗಾವಣೆ ಮಾಡಿರುವ ಬ್ಯಾಂಕ್​ ಖಾತೆಗಳ ವಿವರಗಳನ್ನು ಸ್ವಾಮೀಜಿ ಪೊಲೀಸರಿಗೆ ಸಲ್ಲಿಸಿದ್ದಾರೆ.