ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..? -ಸರ್ಕಾರದ ಆದೇಶದ ಸಂಪೂರ್ಣ ಮಾಹಿತಿ

ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಆದೇಶ ಪ್ರಕಟಿಸಿದೆ.
ಕಾರ್ಡ್​ನಲ್ಲಿರುವ ಯಜಮಾನಿಯೇ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿ:
1. ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್​ ಕಾರ್ಡ್​ದಾರರು, ಅಂತ್ಯೋದಯ ಕಾರ್ಡ್​ದಾರರು ಮತ್ತು ಎಪಿಎಲ್​ ಕಾರ್ಡ್​ ಹೊಂದಿರುವ ಕುಟುಂಬಗಳಿಗೆ ಯೋಜನೆಯ ಲಾಭ ಸಿಗಲಿದೆ.
2. ಬಿಪಿಎಲ್​, ಅಂತ್ಯೋದಯ, ಎಪಿಎಲ್​ ಕಾರ್ಡ್​ಗಳಲ್ಲಿ ಯಜಮಾನಿ ಎಂದು ನಮೂದಿಸಿರುವ ಮಹಿಳೆಯೇ ಖಾತೆಗೆ 2 ಸಾವಿರ ರೂಪಾಯಿ ಜಮೆ ಆಗಲಿದೆ.
3. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಂದು ಮಹಿಳೆಗೆ ಮಾತ್ರ 2 ಸಾವಿರ ರೂಪಾಯಿ ಸಿಗಲಿದೆ.
ಆದಾಯ ತೆರಿಗೆ ಮತ್ತು ಜಿಎಸ್​ಟಿ ತೆರಿಗೆ ಸಲ್ಲಿಸುವವರಿಗೆ ಗೃಹ ಲಕ್ಷ್ಮೀ ಇಲ್ಲ:
1. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅವರಿಗೆ ಈ ಯೋಜನೆಯ ಲಾಭ ಸಿಗಲ್ಲ.
2. ಕುಟುಂಬದ ಯಜಮಾನಿ ಅಥವಾ ಆಕೆಯ ಪತಿ ಜಿಎಸ್​ಟಿ ತೆರಿಗೆ ಸಲ್ಲಿಸುತ್ತಿದ್ದರೆ ಅವರಿಗೂ ಈ ಯೋಜನೆಯ ಲಾಭ ಸಿಗಲ್ಲ.
ಅರ್ಜಿ ಸಲ್ಲಿಕೆ ಎಂದಿನಿಂದ:
ಜೂನ್​ 15ರಿಂದ ಜುಲೈ 15ರವರೆಗೆ ಸೇವಾ ಸಿಂಧು ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದೆ. ಜುಲೈ 15ರಿಂದ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಆಯ್ಕೆಗೊಂಡ ಫಲಾನುಭವಿಗಳ ಖಾತೆಗೆ ಆಗಸ್ಟ್​ 15ರಿಂದ ತಿಂಗಳಿಗೆ 2 ಸಾವಿರ ರೂಪಾಯಿ ಜಮೆ ಆಗಲಿದೆ.
ಅರ್ಜಿ ಸಲ್ಲಿಕೆ ಹೇಗೆ..?:
ಸೇವಾ ಸಿಂಧು ವೆಬ್​ಸೈಟ್​ಗೆ ಹೋಗಿ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಕೆ ವೇಳೆ ದಾಖಲೆಗಳು:
ಆಧಾರ್​ ಕಾರ್ಡ್​, ಬ್ಯಾಂಕ್​ ಖಾತೆ ಸಂಖ್ಯೆ, ಬ್ಯಾಂಕ್​ ಖಾತೆಯಲ್ಲಿರುವವರರ ಹೆಸರಿನ ಮಾಹಿತಿ
ತಪ್ಪು ಮಾಹಿತಿ ನೀಡಿದರೆ ಹಣ ವಾಪಸ್​ ವಸೂಲಿ:
1. ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರರು ಸ್ವಯಂಘೋಷಣೆ ಮಾಡಿಕೊಳ್ಳಬೇಕಾಗುತ್ತದೆ.
2. ಅರ್ಜಿದಾರರು ಸ್ವಯಂ ಘೋಷಣೆ ಮಾಡಿಕೊಂಡು ಅರ್ಜಿಯಲ್ಲಿ ನೀಡಿರುವ ಮಾಹಿತಿಗಳನ್ನು ನಂತರ ಪರಿಶೀಲನೆಗೂ ಒಳಪಡಿಸಲಾಗುತ್ತದೆ.
3. ಒಂದೇ ವೇಳೆ ಅರ್ಜಿ ಸಲ್ಲಿಸುವ ವೇಳೆ ತಪ್ಪು ಮಾಹಿತಿ ನೀಡಿ ಗೃಹ ಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆದಿರುವುದು ಕಂಡುಬಂದರೆ ಆಗ ಗೃಹ ಲಕ್ಷ್ಮೀ ಯೋಜನೆಯಡಿ ಪಡೆದಿರುವ ಅಷ್ಟೂ ಮೊತ್ತವನ್ನು ಅರ್ಜಿದಾರರಿಂದ ವಸೂಲಿ ಮಾಡಲಾಗುತ್ತದೆ. 
4.  ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದವರ ವಿರುದ್ಧ ಮೇಲೆ ಕ್ರಮವನ್ನೂ ಕೈಗೊಳ್ಳಲಾಗುತ್ತದೆ.
ಬ್ಯಾಂಕ್​ ಖಾತೆಗೆ ಆಧಾರ್​ ಜೋಡಣೆ ಕಡ್ಡಾಯ:
ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು ತಮ್ಮ ಬ್ಯಾಂಕ್​ ಖಾತೆಗೆ ಆಧಾರ್​ ಜೋಡಣೆ ಮಾಡುವುದು ಕಡ್ಡಾಯ.
ಇವರಿಗೂ ಸಿಗುತ್ತೆ:
ಒಂದು ವೇಳೆ ಮನೆಯ ಯಜಮಾನಿ ವೃದಾಪ್ಯ ವೇತನ ಪಡೆಯುತ್ತಿದ್ದರೆ/ವಿಧವಾ ವೇತನ ಪಡೆಯುತ್ತಿದ್ದರೆ/ವಿಕಲಚೇತನರ ವೇತನಾ ಪಡೆಯುತ್ತಿದ್ದರೆ ಅವರಿಗೂ ಗೃಹ ಲಕ್ಷ್ಮೀ ಯೋಜನೆಯ ಲಾಭ ಸಿಗಲಿದೆ.