ಶೃಂಗೇರಿ ಶ್ರೀ ಶಾರದ ಪೀಠ (Sringeri Peeta)ದ ನೂತನ ಆಡಳಿತಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (CEO- ಸಿಇಒ) ಆಗಿ ಪಿ.ಎ. ಮುರಳಿ ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಜಗದ್ಗುರು ಶಂಕರಾಚಾರ್ಯ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ನಿರ್ದೇಶನದಂತೆ 1989ರಲ್ಲಿ ಡಾ. ವಿ. ಆರ್. ಗೌರಿಶಂಕರ್ ಅವರನ್ನು ಶೃಂಗೇರಿ ಮಠದ ಆಡಳಿತಾಧಿಕಾರಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿತ್ತು. ಇದಾದ ಬಳಿಕ ಸುಮಾರು 35 ವರ್ಷಗಳ ಕಾಲ ಅವರು ಮಠದ ಸಂಪೂರ್ಣ ಆಡಳಿತವನ್ನು ನಿರ್ವಹಿಸಿದ್ದರು.
ಇದೀಗ ಶ್ರೀ ಶಾರದ ಪೀಠದ ನೂತನ ಸಿಇಒ ಮತ್ತು ಆಡಳಿತಾಧಿಕಾರಿ ಆಗಿ ಪಿ. ಎ. ಮುರಳಿ ಅವರನ್ನು ಜಗದ್ಗುರು ಶ್ರೀ ಶಂಕರಾಚಾರ್ಯ ಭಾರತೀ ತೀರ್ಥ ಮಹಾಸ್ವಾಮಿಗಳ ಆದೇಶದ ಮೇರೆಗೆ ನೇಮಿಸಲಾಗಿದೆ. ವಿ.ಆರ್ ಗೌರಿಶಂಕರ್ ಅವರು ನೂತನ ಸಿಇಒ ಅವರಿಗೆ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ನೂತನ ಆಡಳಿತಾಧಿಕಾರಿಯಾಗಿ ನೇಮಕವಾದ ಪಿ.ಎ.ಮುರಳಿಯವರನ್ನು ಕಾಶ್ಮೀರದ ಶಾರದಾ ಸಂರಕ್ಷಣಾ ಸಮಿತಿ ಸಂಸ್ಥಾಪಕರಾದ ರವೀಂದ್ರ ಪಂಡಿತ್ ಅವರು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.
ಶೃಂಗೇರಿ ಶಾರದಾ ಪೀಠದ ಕಿರಿಯಶ್ರೀಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಸನ್ಯಾಸ ದೀಕ್ಷೆ ಸ್ವೀಕರಿಸಿ ಫೆ.12ಕ್ಕೆ 9ನೇ ವಾರ್ಷಿಕೋತ್ಸವದ ಪ್ರಯುಕ್ತ 35 ವರ್ಷಗಳ ಶೃಂಗೇರಿ ಮಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಗೌರಿಶಂಕರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲು ಮಠವು ನಿರ್ಧರಿಸಿದೆ