ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ರಾಮ ಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ದೇವಾಲಯವನ್ನು ಜನವರಿ 22ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ಅದೀಗ ಭಾರತದ ಹೆಮ್ಮೆ ಹಾಗೂ ಸಾಂಸ್ಕೃತಿಕ ಸಂಕೇತವಾಗಿದೆ. ಅದನ್ನು ಗಣರಾಜ್ಯೋತ್ಸವ (Republic day 2024) ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮ್ಯಾಕ್ರೋನ್ ಅವರಿಗೆ ನೀಡಲಾಯಿತು.
ಪಿಎಂ ಮೋದಿ ಮತ್ತು ಮ್ಯಾಕ್ರನ್ ಜೈಪುರದಲ್ಲಿ ಗುರುವಾರ ಚಾಯ್ಪೆ ಚರ್ಚಾ ನಡೆಸಿದ್ದಾರೆ. ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿಯುತ್ತಾ ಪರಸ್ಪರ ಸಂವಹನ ನಡೆಸಿದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಯುಪಿಐ ಬಳಸಿ ಅಲ್ಲಿ ಹಣ ಪಾವತಿ ಮಾಡಿದ್ದಾರೆ. ಜೈಪುರದ ಹವಾ ಮಹಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಯುಪಿಐ ಪಾವತಿ ವ್ಯವಸ್ಥೆಯನ್ನು ಮೋದಿ ವಿವರಿಸಿದರು.
ಹವಾ ಮಹಲ್ ಗೆ ಭೇಟಿ ನೀಡುವ ಮೊದಲು ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೈಪುರದಲ್ಲಿ ಮೆಗಾ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಫ್ರೆಂಚ್ ಅಧ್ಯಕ್ಷರು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ.