India – West Indies Test: ಅಪ್ಪ-ಮಗನನ್ನು ಔಟ್​ ಮಾಡಿದ ಮೊದಲ ಬೌಲರ್​ – ಆರ್​ ಅಶ್ವಿನ್​ ಹೊಸ ವಿಕೆಟ್​ ದಾಖಲೆ

ಆರ್​ ಅಶ್ವಿನ್​ ಸ್ಪಿನ್​ ಸುಳಿಗೆ ಕೆರೆಬಿಯನ್​ ಕಂಗೆಟ್ಟಿದೆ. ಐದು ವಿಕೆಟ್​ಗಳ ಬೇಟೆಯೊಂದಿಗೆ ಸ್ಪಿನ್ನರ್​ ಅಶ್ವಿನ್​ ವಿಂಡೀಸ್​​ ಅತೀ ವೇಗದ ಸರ್ವಪತನಕ್ಕೆ ಕಾರಣರಾಗಿದ್ದಾರೆ.

ವಿಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಐದು ವಿಕೆಟ್​ಗಳ ಗೊಂಚಲು ಪಡೆಯುವ ಮೂಲಕ ಅಶ್ವಿನ್​ ಅವರು 33 ಇನ್ನಿಂಗ್ಸ್​ನಲ್ಲಿ ಐದು ವಿಕೆಟ್​ ಪಡೆದಿರುವ ಸಾಧನೆ ಮಾಡಿದ್ದಾರೆ.

ಅಲ್ಲದೇ ಅಶ್ವಿನ್​ ಅವರ ಒಟ್ಟು ವಿಕೆಟ್ ಗಳಿಕೆಗೆ 702ಕ್ಕೆ ಮುಟ್ಟಿದೆ. ಈ ಮೂಲಕ ಅತೀ ಹೆಚ್ಚು ವಿಕೆಟ್​ ಪಡೆದಿರುವ ಭಾರತದ ಬೌಲರ್​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅನಿಲ್​ ಕುಂಬ್ಳೆ ಒಟ್ಟು 956 ವಿಕೆಟ್​ ಪಡೆದಿದ್ದರೆ, ಹರ್ಭಜನ್​ ಸಿಂಗ್​ 711 ವಿಕೆಟ್​ ಪಡೆದಿದ್ದಾರೆ.

ಅಶ್ವಿನ್​ ಅವರು ಟೆಸ್ಟ್​ನಲ್ಲಿ ​ 479, ಏಕದಿನ ಪಂದ್ಯಗಳಲ್ಲಿ 151 ಮತ್ತು ಟಿ-ಟ್ವೆಂಟಿ ಪಂದ್ಯಗಳಲ್ಲಿ 72 ವಿಕೆಟ್​ ಗಳಿಸಿದ್ದಾರೆ.

ಅತೀ ಹೆಚ್ಚು ಬಾರಿ ಐದು ವಿಕೆಟ್​ ಪಡೆದಿರುವ ಬೌಲರ್​ಗಳು:

ಶ್ರೀಲಂಕಾದ ಲೆಗ್​ಸ್ಪಿನ್ನರ್​ ಮುತ್ತಯ್ಯ ಮುರಳೀಧರ್​ 67 ಬಾರಿ, ಆಸ್ಟ್ರೇಲಿಯಾದ ಲೆಗ್​ಸ್ಪಿನ್ನರ್​ ಶೇನ್​ವಾರ್ನ್​ 37 ಬಾರಿ, ನ್ಯೂಜಿಲೆಂಡ್​ ವೇಗಿ ರಿಚರ್ಡ್​ ಹ್ಯಾಡ್ಲಿ 36 ಬಾರಿ, ಲೆಗ್​ಸ್ಪಿನ್ನರ್​ ಅನಿಲ್​ ಕುಂಬ್ಳೆ 35 ಬಾರಿ, ಶ್ರೀಲಂಕಾದ ಬೌಲರ್​ ರಂಗನ ಹೆರಾತ್​ 34 ಬಾರಿ ಐದು ವಿಕೆಟ್​ ಗೊಂಚಲು ಪಡೆದಿದ್ದಾರೆ.

ಆರ್​ ಅಶ್ವಿನ್​ ಅವರು 33 ಬಾರಿ 5 ವಿಕೆಟ್​ ಪಡೆಯುವುದರೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಅಶ್ವಿನ್​ ಅವರ ವಿಕೆಟ್​ ಸಾಧನೆ ಯಾವ ದೇಶದ ವಿರುದ್ಧದ ಎಷ್ಟಿದೆ..?

ಆಸ್ಟ್ರೇಲಿಯಾ ವಿರುದ್ಧ 114 ವಿಕೆಟ್​, ಇಂಗ್ಲೆಂಡ್​ ವಿರುದ್ಧ 88, ನ್ಯೂಜಿಲೆಂಡ್​ ವಿರುದ್ಧ 66, ವೆಸ್ಟ್​ಇಂಡೀಸ್​ ವಿರುದ್ಧ 65, ಶ್ರೀಲಂಕಾ ವಿರುದ್ಧ 62, ದಕ್ಷಿಣ ಆಫ್ರಿಕಾ ವಿರುದ್ಧ 56, ಬಾಂಗ್ಲಾದೇಶ ವಿರುದ್ಧ 23 ಮತ್ತು ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್​ ಕಿತ್ತಿದ್ದಾರೆ.

ಅಪ್ಪ-ಮಗನನ್ನು ಔಟ್​ ಮಾಡಿದ ಮೊದಲ ಬೌಲರ್​:

ಅಪ್ಪ ಮಗನನ್ನು ಔಟ್​ ಮಾಡಿದ ಮೊದಲ ಬೌಲರ್​ ಎಂಬ ಹೆಗ್ಗಳಿಕೆಯೂ ಅಶ್ವಿನ್​ ಅವರ ಪಾಲಾಗಿದೆ. ಮೊದಲ ಟೆಸ್ಟ್​ನಲ್ಲಿ ಅಶ್ವಿನ್​ ಅವರು ತಗೆನರೈನ್​ ಚಂದ್ರಪೌಲ್​ ಅವರನ್ನು 12 ರನ್​ಗೆ ಔಟ್​ ಮಾಡಿದರು. ಈ ಹಿಂದೆ ಅಶ್ವಿನ್​ ತಗೆನರೈನ್​ ತಂದೆ ಪ್ರಸಿದ್ಧ ಆಟಗಾರ ಶಿವನರೈನ್​ ಚಂದ್ರಪೌಲ್​ ಅವರನ್ನು ಔಟ್​ ಮಾಡಿದ್ದರು.

LEAVE A REPLY

Please enter your comment!
Please enter your name here