India-West Indies Test: ಸ್ಪಿನ್​ ದಾಳಿಗೆ ವಿಂಡೀಸ್​ ವಿಲವಿಲ – ಮೊದಲ ಪಂದ್ಯದಲ್ಲಿ ಜೈಸ್ವಾಲ್​ ಯಶಸ್ವಿ

ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ 150 ರನ್​ಗಳಿಗೆ ಆಲೌಟಾಗಿರುವ ವೆಸ್ಟ್​ಇಂಡೀಸ್​ ಮೊದಲ ದಿನದ ಅಂತ್ಯಕ್ಕೆ ಭಾರತದ ವಿರುದ್ಧದ ಕೇವಲ 70 ರನ್​ಗಳ ಮುನ್ನಡೆಯಲ್ಲಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ವಿಕೆಟ್​ ನಷ್ಟವಿಲ್ಲದೇ 80 ರನ್​ ಗಳಿಸಿದೆ.

ಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ ಆಡುತ್ತಿರುವ ಯಶಸ್ವಿ ಜೈಸ್ವಾಲ್​ 40 ರನ್​ ಮತ್ತು ನಾಯಕ ರೋಹಿತ್ ಶರ್ಮಾ 30 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಕೆರೆಬಿಯನ್​ ತಂಡಕ್ಕೆ ಸ್ಪಿನ್ನರ್​ ಆರ್​ ಅಶ್ವಿನ್​ ಮಾರಕವಾದರು. 60 ರನ್​ಗೆ 5 ವಿಕೆಟ್​ ಪಡೆಯುವ ಮೂಲಕ ಕೇವಲ 60.3 ಓವರ್​ಗಳಲ್ಲೇ ವಿಂಡೀಸ್​ ಸರ್ವಪತನಕ್ಕೆ ಕಾರಣವಾದರು. ರವೀಂದ್ರ ಜಡೇಜಾ 26 ರನ್​ಗೆ 3 ವಿಕೆಟ್​ ಕಿತ್ತರು. ಶಾರ್ದೂಲ್​ ಥಾಕೂರು ಮತ್ತು ಮೊಹಮ್ಮದ್​ ಸಿರಾಜ್​ ತಲಾ 1 ವಿಕೆಟ್​ ಪಡೆದರು.

ವಿಂಡೀಸ್​ ಪರ ಅಲಿಕ್​ ಅಥನ್ಜೆ 47 ರನ್​ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಭಾರತದ ಬೌಲರ್​​ಗಳಿಗೆ ಪ್ರತಿರೋಧ ತೋರಲಿಲ್ಲ.

LEAVE A REPLY

Please enter your comment!
Please enter your name here