ಚಾಯ್.. ಚಾಯ್.. ಸ್ಪೆಷಲ್.. ಸ್ಪೆಷಲ್ ಚಾಯ್..!

ಇವತ್ತು ಅಂತಾರಾಷ್ಟ್ರೀಯ ಚಹಾ ದಿನವಂತೆ.. ಈ ಪ್ರಯುಕ್ತ ಚಾಯ್.. ಚಾಯ್.. ಸ್ಪೆಷಲ್.. ಸ್ಪೆಷಲ್ ಚಾಯ್ ಎನ್ನುತ್ತಾ ಎಷ್ಟು ವೆರೈಟಿ ಚಾಯ್​ಗಳಿಗೆ ಎನ್ನುವುದನ್ನು ನೋಡೋಣ

ಶುಂಠಿ ಟೀ 

ಜೀರ್ಣ ಸಮಸ್ಯೆ, ಅಜೀರ್ಣತೆಯನ್ನು ನಿವಾರಿಸುತ್ತದೆ. ಕೆಮ್ಮು-ನೆಗಡಿಯಿಂದಲೂ ಉಪಶಮನ ನೀಡುತ್ತದೆ. ದೇಹದ ನೋವುಗಳನ್ನು ಕಡಿಮೆ ಮಾಡುತ್ತದೆ. ಹೃದಯ ಆರೋಗ್ಯದಿಂದ ಕೆಲಸ ಮಾಡುವಂತೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಲೆಮೆನ್ ಟೀ

ಲೆಮೆನ್ ಟೀಯಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮ ಆರೋಗ್ಯದಿಂದ ಇರುತ್ತದೆ.. ಆಂಟಿ ಆಕ್ಸಿಡೆಂಟ್ ಗಳು ಶರೀರದಲ್ಲಿರುವ ಮಲಿನವನ್ನು ಹೊರಗೆ ಹಾಕುತ್ತದೆ. ದೇಹದ ತೂಕ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

 ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಆಟಿ ಆಕ್ಸಿಡೆಂಟ್ಸ್ ಪುಷ್ಕಳವಾಗಿ ಇರುತ್ತವೆ. ಇದು ಶರೀರದ ಕೊಬ್ಬನ್ನು ಇಳಿಸಲು, ಮೆದುಳಿನ ಕೆಲಸವನ್ನು ಚುರುಕುಗೊಳಿಸಲು.. ಹೃದಯದ ಆರೋಗ್ಯಕ್ಕೂ ನೆರವಾಗುತ್ತದೆ. ಇದು ಚರ್ಮ ಸಂಬಂಧಿ ಕಾಯಿಲೆಗಳನ್ನು ವಾಸಿ ಮಾಡುತ್ತದೆ.

ಮಿಂಟ್ ಟೀ

ಮಿಂಟ್ ಟೀ.. ಇದನ್ನು ಪುದೀನಾದಿಂದ ಮಾಡುತ್ತಾರೆ. ಇದು ಹೊಟ್ಟೆ ನೋವು, ಮಾನಸಿಕ ಒತ್ತಡ, ತಲೆನೋವು, ಮೈಗ್ರೇನ್​ನಿಂದ ಉಪಶಮನ ನೀಡುತ್ತದೆ. ಅಜೀರ್ಣತೆಗೂ ಇದು ರಾಮಬಾಣ.

 ವೈಟ್ ಟೀ

ಇದು ಹೃದ್ರೋಗ ಸಮಸ್ಯೆ ಬರದಂತೆ ನಮ್ಮನ್ನು ಕಾಪಾಡುತ್ತದೆ. ವೃದ್ಧಾಪ್ಯದ ಛಾಯೆಗಳು ಬೇಗ ಬರದಿರಲು ನೆರವಾಗುತ್ತದೆ. ದೇಹ ತೂಕ ಇಳಿಸಿಕೊಳ್ಳಲು ಕೂಡ ಇದು ನೆರವಾಗುತ್ತದೆ.

 ಪು-ಯೆ ಟೀ

 ಪು-ಯೆ ಟೀ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಟಾಕ್ಸಿನ್, ಪ್ರೀ ರಾಡಿಕಲ್ಸ್​ ಅನ್ನು ತೊಲಗಿಸುತ್ತದೆ. ದೇಹ ತೂಕ ಇಳಿಸಿಕೊಳ್ಳಲು ಕೂಡ ಇದು ಸಹಕಾರಿ. ವೃದ್ಧಾಪ್ಯದ ಛಾಯೆಗಳು ಬೇಗ ಬರದಿರಲು ನೆರವಾಗುತ್ತದೆ.

 ಉಲಾಂಗ್ ಟೀ

ಈ ಟೀ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದೇಹಭಾರ ಇಳಿಕೆ, ನಿದ್ರೆಯ ಪ್ರಮಾಣ ಹೆಚ್ಚಳ, ಇನ್​ಫ್ಲಾಮೇಟರಿ ಕರುಳು ಸಮಸ್ಯೆಗಳಿಗೆ ಇದು ರಾಮಬಾಣ. ಇದರಲ್ಲಿರುವ ಆಂಟಿ ಅಲರ್ಜಿ ಗುಣಗಳು ಚರ್ಮರೋಗ ನಿವಾರಣೆಗೆ ಸಹಕಾರಿ.

ಬ್ಲಾಕ್ ಟೀ

ಇದರಲ್ಲಿ ಆಕ್ಸಿಡೆಂಟ್ ಅಧಿಕವಾಗಿ ಇರುತ್ತವೆ. ಈ ಕಾರಣದಿಂದ ಶರೀರ, ಮುಖದಲ್ಲಿ ಉರಿ ಕಡಿಮೆ ಆಗುತ್ತದೆ. ಪಚನಕ್ರಿಯೆಯನ್ನು ಸರಳ ಮಾಡುತ್ತದೆ. ಕ್ಯಾನ್ಸರ್ ತಡೆಯುವ ಶಕ್ತಿ ಬ್ಲಾಕ್ ಟೀಗೆ ಇದೆ ಎಂದು ಅಧ್ಯಯನಗಳು ತಿಳಿಸುತ್ತವೆ