ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭಾಗಿಯಾಗುವ ಸಾಧ್ಯತೆ ಇದೆ ಅಂತ ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಲಭಿಸಿದೆ.
ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ತಿದೆ ಎಂಬ ವಿಪಕ್ಷಗಳ ಆರೋಪದ ಮಧ್ಯೆಯೇ, ಸೋನಿಯಾ ಗಾಂಧಿಯವರ ಈ ನಡೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸುದ್ದಿ ಮಾಡಿದೆ. ಅಲ್ಲದೆ ಇಂಡಿಯಾ ಮೈತ್ರಿ ಕೂಟದಲ್ಲಿಯೂ ಚರ್ಚೆಗೆ ಕಾರಣವಾಗಿದೆ.
ಕಾರ್ಯಕ್ರಮಕ್ಕೆ ಆಹ್ವಾನ ಬಂದ ಕೂಡಲೇ ಸೋನಿಯಾ ಗಾಂಧಿ ತಾವು ಭಾಗಿಯಾಗದಿದ್ದರೂ ಅವರನ್ನು ಪ್ರತಿನಿಧಿಸುವ ನಿಯೋಗವನ್ನು ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ರು. ಆದ್ರೀಗ ಇಂಡಿಯಾ ಮೈತ್ರಿಕೂಟದ ಪ್ರಮುಖರೂ ಆಗಿರುವ ಸೋನಿಯಾ ಕಾರ್ಯಕ್ರಮದಲ್ಲಿ ಭಾಗಿಯಾದ್ರೆ, ಮೈತ್ರಿಕೂಟದಲ್ಲಿ ಯೂನಿಯನ್ ಮುಸ್ಲಿಂ ಲೀಗ್ನಂತಹ ರಾಮಮಂದಿರ ವಿರೋಧಿ ಪಕ್ಷಗಳ ವಿರೋಧ ಎದುರಿಸಬೇಕಾಗಬಹುದು.
ಮತ್ತೊಂದೆಡೆ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡಬಹುದು. ಹೀಗಾಗಿ ಕಾಂಗ್ರೆಸ್ ಗೆ ಇದೀಗ ಧರ್ಮಸಂಕಟ ಎದುರಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಸಾಧಕ-ಬಾಧಕಗಳ ಕುರಿತು ತಲೆಕೆಡಿಸಿಕೊಂಡಿದೆ.