ನಿಗಮ ಮಂಡಳಿ ನೇಮಕ ಕುರಿತಾಗಿ ತಲೆಕೆಡಿಸಿಕೊಂಡಿರೋ ಸಿಎಂ, ಈ ಮಧ್ಯೆಯೇ ಕಾಂಗ್ರೆಸ್ ನ ಹಿರಿಯ ರೆಬೆಲ್ ಶಾಸಕರಿಗಾಗಿ ವಿಶೇಷ ಹುದ್ದೆ ಸೃಷ್ಟಿಸಿ ಅವರನ್ನು ತಣ್ಣಗೆ ಮಾಡಿದ್ದಾರೆ.
ಸಚಿವ ಸ್ಥಾನ ನೀಡದಿದ್ದ ಕಾರಣಕ್ಕೆ ಅತೃಪ್ತರಾಗಿದ್ದ ಬಸವರಾಜ್ ರಾಯರೆಡ್ಡಿ, ಬಿ.ಆರ್ ಪಾಟೀಲ್ ಹಾಗೂ ಆರ್.ವಿ ದೇಶಪಾಂಡೆಗೆ ವಿಶೇಷ ಹುದ್ದೆಗೆ ನೀಡಲಾಗಿದೆ. ಇದು ಸಂಪುಟ ದರ್ಜೆಯ ಸ್ಥಾನಮಾನವಾಗಿದ್ದು, ಮುನಿಸಿಕೊಂಡಿದ್ದ ಮೂವರೂ ಶಾಸಕರು ಈಗ ತಣಿದಿದ್ದಾರೆ.
ಬಸವರಾಜ್ ರಾಯರೆಡ್ಡಿಯವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ, ಬಿ.ಆರ್ ಪಾಟೀಲ್ ರವರಿಗೆ ಸಿಎಂ ಸಲಹೆಗಾರರಾಗಿ ಮತ್ತು ಆರ್.ವಿ ದೇಶಪಾಂಡೆಯವರನ್ನು ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರಾಗಿ ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.