ಕೊರೋನಾ ಸೋಂಕಿನಿಂದ ಸೋನಿಯಾ ಗಾಂಧಿಯವರು ಇದೇ ಜೂನ್ 12 ರಂದು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಅನಂತರ ಆಸ್ಪತ್ರೆಗೆಯಲ್ಲಿ ಸೋನಿಯಾ ಗಾಂಧಿಯವರು ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದರು.
ಇದೀಗ, ಸೋನಿಯಾ ಗಾಂಧಿಯವರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿಯವರಿಗೆ ನ್ಯಾಷನಲ್ ಹೆರಾಲ್ಡ್ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ED) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.
ರಾಹುಲ್ ಗಾಂಧಿಯವರು ಇಡಿ ವಿಚಾರಣೆಗೆ ಇಂದು ಸೋಮಾವರ ಸೇರಿದಂತೆ 4 ಬಾರಿ ಹಾಜರಾಗಿದ್ದಾರೆ. ಇದೀಗ, ಸೋನಿಯಾ ಗಾಮಧಿಯವರು ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.