Social Media influncers : ಕೇಂದ್ರ ಸರ್ಕಾರದಿಂದ ನೂತನ ಮಾರ್ಗಸೂಚಿ

Social Media Influncers

ಸಾಮಾಜಿಕ ಜಾಲತಾಣಗಳಲ್ಲಿ ಉತ್ಪನ್ನಗಳನ್ನು ಪ್ರಚಾರ ಮಾಡುವ ಪ್ರಭಾವಿಗಳಿಗೆ (Social Media influncers) ಸರ್ಕಾರ ಶೀಘ್ರವೇ ಮಾರ್ಗಸೂಚಿಗಳನ್ನು ಜಾರಿಗೊಳಿಸಲಿದೆ ಎಂಬ ಬಗ್ಗೆ ತಿಳಿದುಬಂದಿದೆ.

ಸರ್ಕಾರದ ಮಾರ್ಗಸೂಚಿ ಜಾರಿಗೆ ಬಂದ ನಂತರ ಸಾಮಾಜಿಕ ಜಾಲತಾಣದಲ್ಲಿನ ಪ್ರಭಾವಿಗಳು (Social Media influncers) ಪ್ರಚಾರ ಮಾಡುವ ಉತ್ಪನ್ನಗಳೊಂದಿಗೆ ಅವರ ಜೊತೆಗಾರಿಕೆಯನ್ನು ಅಧಿಕೃತವಾಗಿ ಘೋಷಿಸಿಕೊಳ್ಳುವುದು ಕಡ್ಡಾಯವಾಗಲಿದೆ.

ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆ ಈ ಮಾರ್ಗಸೂಚಿಗಳನ್ನು ಪ್ರಕಟಿಸಲಿದ್ದು, ಸಾಮಾಜಿಕ ಜಾಲತಾಣದಲ್ಲಿನ ಪ್ರಭಾವಿಗಳು ಯಾವುದನ್ನು ಮಾಡಬಹುದು ಮತ್ತು ಯಾವುದನ್ನು ಮಾಡಬಾರದು ಎಂಬುದನ್ನು ನಿರ್ಧರಿಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ : ಜಾಹೀರಾತು ಸಿಎಂಗೆ ನಾಚಿಕೆ ಆಗ್ಬೇಕು – ಕೇಜ್ರಿವಾಲ್‌ಗೆ ಬಿ ಎಲ್ ಸಂತೋಷ್ ತಿರುಗೇಟು

ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ, ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು ಉತ್ಪನ್ನಗಳನ್ನು ಪ್ರಚಾರ ಮಾಡುವುದಕ್ಕಾಗಿ ಬ್ರಾಂಡ್ ಗಳಿಂದ ಹಣವನ್ನು ಪಡೆಯುತ್ತಿದ್ದಾರೆ.

ಹಣ ಪಡೆದು ಉತ್ಪನ್ನಗಳನ್ನು ಪ್ರಚಾರ ಮಾಡುವವರು ಆ ಸಂಸ್ಥೆಯೊಂದಿಗಿನ ಜೊತೆಗಾರಿಕೆಯನ್ನು ಘೋಷಿಸಿಕೊಳ್ಳಬೇಕು ಹಾಗೂ ಅನುಮೋದಿಸುವ ಉತ್ಪನ್ನಗಳಿಗೆ ಸಂಬಂಧಿಸಿದ ಪೋಸ್ಟ್ ನಲ್ಲಿ ಡಿಸ್ಕ್ಲೈಮರ್ ಗಳನ್ನು ಹಾಕಬೇಕು ಎಂಬುದು ಮಾರ್ಗಸೂಚಿಯ ಪ್ರಮುಖ ಅಂಶವಾಗಿರಲಿದ್ದು, ಮುಂದಿನ 15 ದಿನಗಳಲ್ಲಿ ಮಾರ್ಗಸೂಚಿ ಪ್ರಕಟಗೊಳ್ಳಲಿದೆ. ಇದನ್ನೂ ಓದಿ : ಸೋಷಿಯಲ್​ ಮೀಡಿಯಾಕ್ಕೆ ಬಂದ ಸಾಧು ಮಹಾರಾಜ್​..!

LEAVE A REPLY

Please enter your comment!
Please enter your name here