ನಟ ದರ್ಶನ್ ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿದ್ದಾನೆ.
ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಕಿಡಿಗೇಡಿ ಈ ಕೃತ್ಯ ಎಸಗಿದ್ದಾನೆ.
ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೇದಿಕೆ ಹತ್ತುತ್ತಿದ್ದಂತೆ ಚಪ್ಪಲಿ ಎಸೆಯಲಾಗಿದೆ. ಆ ಚಪ್ಪಲಿ ನೇರವಾಗಿ ದರ್ಶನ್ ಅವರ ಮೇಲೆಯೇ ಬಿದ್ದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಕೃತ್ಯ ಎಸೆಯಲಾಗಿದೆ.
ಚಪ್ಪಲಿ ತಮ್ಮ ಮೇಲೆ ಬಿದ್ದ ಬಳಿಕ ದರ್ಶನ್ ತಲೆಯಲ್ಲಾಡಿಸಿದ್ದು ವೀಡಿಯೋದಲ್ಲಿ ದಾಖಲಾಗಿದೆ.
ಜೊತೆಗೆ ಹಾಡಿನ ಬಿಡುಗಡೆಗೆ ಹಾಕಲಾಗಿದ್ದ ವೇದಿಕೆಯ ಬ್ಯಾನರ್ರನ್ನೂ ಕಿಡಿಗೇಡಿಗಳು ಹರಿದುಹಾಕಿದ್ದಾರೆ.
ದರ್ಶನ್ ಹೇಳಿದ್ದೇನು..?
ತಮ್ಮ ಮೇಲೆ ಚಪ್ಪಲಿ ಎಸೆದವರ ಮೇಲೆ ನಟ ದರ್ಶನ್ ಸಿಟ್ಟಾಗಿಲ್ಲ. ನಿನಗೆ ಒಳ್ಳೆದಾಗ್ಲಿ ಚಿನ್ನ ಎಂದು ಆ ಕಿಡಿಗೇಡಿ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ.
ADVERTISEMENT
ADVERTISEMENT