ಕಾರುಗಳಲ್ಲಿ ಆರು ಏರ್ಬ್ಯಾಗ್ ಕಡ್ಡಾಯಗೊಳಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಒಂದು ಕಾರಿನಲ್ಲಿ ಒಂದು ಏರ್ಬ್ಯಾಗ್ಗೆ ತಗಲುವ ವೆಚ್ಚ ಕೇವಲ 800 ರೂಪಾಯಿ. ಹೀಗಾಗಿ ಹೆಚ್ಚು ಏರ್ ಬ್ಯಾಗ್ಗಳಿಗೆ ವ್ಯವಸ್ಥೆ ಮಾಡುವಂತೆ ಆಟೋಮೊಬೈಲ್ಸ್ ಕಂಪನಿಗಳಿಗೆ ಸರ್ಕಾರ ಸೂಚಿಸಲಿದೆ ಎಂದು ಗಡ್ಕರಿ ಅವರು ರಾಜ್ಯಸಭಾ ಕಲಾಪದಲ್ಲಿ ಉತ್ತರಿಸಿದರು.
ಆರು ಏರ್ ಬ್ಯಾಗ್ ಕಡ್ಡಾಯಗೊಳಿಸುವ ಸಂಬಂಧ ಶೀಘ್ರವೇ ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಸದ್ಯಕ್ಕೆ ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 1 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಪ್ರಮಾಣವನ್ನು 2024ರ ವೇಳೆಗೆ ಅರ್ಧದಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ
ಎಂದು ಸಚಿವ ಗಡ್ಕರಿ ಮಾಹಿತಿ ನೀಡಿದರು.
ADVERTISEMENT
ADVERTISEMENT