ಮಹತ್ವದ ಬೆಳವಣಿಗೆಯಲ್ಲಿ ಕ್ರಿಪ್ಟೋ ಕರೆನ್ಸಿ ಏಜೆನ್ಸಿ ವಾಜಿರಿಕ್ಸ್ನ 64.67 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ಠೇವಣಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.
ವಾಜಿರಿಕ್ಸ್ನ ಮಾತೃ ಕಂಪನಿ ಆಗಿರುವ ಹೈದ್ರಾಬಾದ್ನ ಜನ್ಮೈ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಮೇಲೆ ದಾಳಿ ನಡೆಸಿರುವ ಇಡಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಭಾರತದಲ್ಲಿ ಮೊಬೈಲ್ ಮೂಲಕ ಸಾಲ ನೀಡುತ್ತಿರುವ ಚೀನಾದ ಮೊಬೈಲ್ ಆಪ್ಗಳಲ್ಲಿ ಆಗಿರುವ ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕೈಗೊಂಡಿರುವ ತನಿಖೆ ಈಗ ವಾಜಿರಿಕ್ಸ್ಗೆ ಕಂಟಕವಾಗಿದೆ.
ವಾಜಿರಿಕ್ಸ್ ವಿರುದ್ಧ ವಿದೇಶಿ ವಿನಿಮಯ ಉಲ್ಲಂಘನೆ ಆರೋಪವಿದೆ.
ADVERTISEMENT
ADVERTISEMENT