ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿಮಂಡಲದ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುವ ಜೊತೆಗೆ ಪ್ರಾದೇಶಿಕ ನ್ಯಾಯದ ಸಮತೋಲನವನ್ನು ಕಾಪಾಡಲಾಗಿದೆ.
ಗ್ರೇಟರ್ ಬೆಂಗಳೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕಕ್ಕೆ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿದೆ. ಒಟ್ಟು 22 ಜಿಲ್ಲೆಗಳಿಗೆ ಪ್ರಾತಿನಿಧ್ಯವನ್ನು ಕಾಂಗ್ರೆಸ್ ಕಲ್ಪಿಸಿದೆ.
ಹಳೆ ಮೈಸೂರು ಭಾಗಕ್ಕೆ ಗರಿಷ್ಠ 9ಸಚಿವ ಸ್ಥಾನ ಸಿಕ್ಕಿವೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ 8, ಕಿತ್ತೂರು ಕರ್ನಾಟಕಕ್ಕೆ 7 ಸಚಿವ ಸ್ಥಾನ ನೀಡಲಾಗಿದೆ. ಗ್ರೇಟರ್ ಬೆಂಗಳೂರಿಗೆ ಏಳು ಸಚಿವ ಸ್ಥಾನ ಸಿಕ್ಕಿವೆ. ಮಧ್ಯ ಮತ್ತು ಮಲೆನಾಡು ಕರ್ನಾಟಕಕ್ಕೆ 3 ಸಚಿವ ಸ್ಥಾನ ಮೀಸಲಿಡಲಾಗಿದೆ. ಕರಾವಳಿ ಕರ್ನಾಟಕಕ್ಕೆ 1 ಸಚಿವ ಸ್ಥಾನ ಸಿಕ್ಕಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಜಿಲ್ಲಾವಾರು ಪ್ರಾತಿನಿಧ್ಯ
ಮೈಸೂರು ಜಿಲ್ಲೆ – 3 ಸಚಿವ ಸ್ಥಾನ – ಸಿದ್ದರಾಮಯ್ಯ, ಹೆಚ್ಸಿ ಮಹದೇವಪ್ಪ, ಕೆ ವೆಂಕಟೇಶ್
ರಾಮನಗರ ಜಿಲ್ಲೆ – 1ಸಚಿವ ಸ್ಥಾನ -ಡಿಕೆ ಶಿವಕುಮಾರ್
ಬೆಂಗಳೂರು ಜಿಲ್ಲೆ – 6 ಸಚಿವ ಸ್ಥಾನ – ಕೆಜೆ ಜಾರ್ಜ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್
ಬೆಳಗಾವಿ ಜಿಲ್ಲೆ – 2 ಸಚಿವ ಸ್ಥಾನ – ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್
ಬೀದರ್ ಜಿಲ್ಲೆ – 2 ಸಚಿವ ಸ್ಥಾನ – ಈಶ್ವರ್ ಖಂಡ್ರೆ, ರಹೀಂ ಖಾನ್
ವಿಜಯಪುರ ಜಿಲ್ಲೆ – 2ಸಚಿವ ಸ್ಥಾನ – ಎಂಬಿ ಪಾಟೀಲ್, ಶಿವಾನಂದ ಪಾಟೀಲ್
ಕಲಬುರಗಿ ಜಿಲ್ಲೆ – 2 ಸಚಿವ ಸ್ಥಾನ – ಪ್ರಿಯಾಂಕ್ ಖರ್ಗೆ, ಡಾ ಶರಣಪ್ರಕಾಶ್ ಪಾಟೀಲ್
ತುಮಕೂರು ಜಿಲ್ಲೆ – 2 ಸಚಿವ ಸ್ಥಾನ – ಪರಮೇಶ್ವರ್, ಕೆಎನ್ ರಾಜಣ್ಣ
ಮಂಡ್ಯ ಜಿಲ್ಲೆ – 1 ಸಚಿವ ಸ್ಥಾನ – ಎನ್ ಚಲುವರಾಯಸ್ವಾಮಿ
ಗದಗ ಜಿಲ್ಲೆ – 1 ಸಚಿವ ಸ್ಥಾನ – ಹೆಚ್ ಕೆ ಪಾಟೀಲ್
ಬಾಗಲಕೋಟೆ ಜಿಲ್ಲೆ – 1 ಸಚಿವ ಸ್ಥಾನ – ಆರ್ ಬಿ ತಿಮ್ಮಾಪುರ್
ಧಾರವಾಡ ಜಿಲ್ಲೆ – 1 ಸಚಿವ ಸ್ಥಾನ – ಸಂತೋಷ್ ಲಾಡ್
ರಾಯಚೂರು ಜಿಲ್ಲೆ – 1 ಸಚಿವ ಸ್ಥಾನ – ಎಂಎಲ್ಸಿ ಬೋಸರಾಜು
ಯಾದಗಿರಿ ಜಿಲ್ಲೆ- 1 ಸಚಿವ ಸ್ಥಾನ – ಶರಣಬಸಪ್ಪ ದರ್ಶನಾಪುರ್
ಕೊಪ್ಪಳ ಜಿಲ್ಲೆ – 1 ಸಚಿವ ಸ್ಥಾನ – ಶಿವರಾಜ ತಂಗಡಗಿ
ಉತ್ತರ ಕನ್ನಡ ಜಿಲ್ಲೆ – 1 ಸಚಿವ ಸ್ಥಾನ – ಮಂಕಾಳ ಸುಬ್ಬ ವೈದ್ಯ
ದಾವಣಗೆರೆ ಜಿಲ್ಲೆ – 1 ಸಚಿವ ಸ್ಥಾನ – ಎಸ್ ಎಸ್ ಮಲ್ಲಿಕಾರ್ಜುನ್
ಚಿತ್ರದುರ್ಗ ಜಿಲ್ಲೆ – 1 ಸಚಿವ ಸ್ಥಾನ – ಡಿ ಸುಧಾಕರ್
ಶಿವಮೊಗ್ಗ ಜಿಲ್ಲೆ – 1 ಸಚಿವ ಸ್ಥಾನ – ಮಧು ಬಂಗಾರಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ- 1 ಸಚಿವ ಸ್ಥಾನ – ಕೆಹೆಚ್ ಮುನಿಯಪ್ಪ
ಚಿಕ್ಕಬಳ್ಳಾಪುರ ಜಿಲ್ಲೆ – 1 ಸಚಿವ ಸ್ಥಾನ – ಡಾ ಎಂ ಸಿ ಸುಧಾಕರ್
ಬಳ್ಳಾರಿ ಜಿಲ್ಲೆ – 1 ಸಚಿವ ಸ್ಥಾನ – ಬಿ ನಾಗೇಂದ್ರ
ADVERTISEMENT
ADVERTISEMENT