ಸಿದ್ದರಾಮಯ್ಯ ಅವರ ಕೊಲೆಗೆ ಸಾರ್ವಜನಿಕರಿಗೆ ನೇರ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಮಾಜಿ ಸಚಿವ, ಮಲ್ಲೇಶ್ವರಂ ಬಿಜೆಪಿ ಶಾಸಕ ಡಾ ಸಿ ಎನ್ ಅಶ್ವತ್ಥ್ ನಾರಾಯಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಐಪಿಸಿ ಕಲಂ 506, 153ರಡಿಯಲ್ಲಿ ಮೈಸೂರು ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ಅಶ್ವತ್ಥ್ ನಾರಾಯಣ್ರೊಬ್ಬರೇ ಆರೋಪಿಯಾಗಿದ್ದಾರೆ.
ಮೈಸೂರು ನಿವಾಸಿಯಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ ಸಿ ಲಕ್ಷ್ಮಣ ಕೊಟ್ಟಿರುವ ದೂರು ಅಧರಿಸಿ ಎಫ್ಐಆರ್ ದಾಖಲಾಗಿದೆ.
ಫೆಬ್ರವರಿ 15ರಂದು ಮಂಡ್ಯದ ಸಾತನೂರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುವಾಗ ಆಗ ಸಚಿವರಾಗಿದ್ದ ಅಶ್ವತ್ಥ್ ನಾರಾಯಣ್ ಅವರು ಟಿಪ್ಪು ಸುಲ್ತಾನನನ್ನು ಉರಿಗೌಡ ಮತ್ತು ನಂಜೇಗೌಡ ಹೇಗೆ ಕೊಂದು ಹಾಕಿದರೋ ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದುಹಾಕಬೇಕೆಂದು ಬಹಿರಂಗವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಅಶ್ವತ್ಥ್ ನಾರಯಣ್ ಅವರು ಸಿದ್ದರಾಮಯ್ಯನವರ ಕೊಲೆಗೆ ಸುಪಾರಿ ನೀಡುವ ಸಂಶಯ ಇರುತ್ತದೆ
ಎಂದು ಲಕ್ಷ್ಮಣ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ADVERTISEMENT
ADVERTISEMENT