Facebook ಮಾತೃಸಂಸ್ಥೆಯಿಂದ ಮತ್ತೆ 10 ಸಾವಿರ ಉದ್ಯೋಗ ಕಡಿತ

ಫೇಸ್​ಬುಕ್​ ಮಾತೃಸಂಸ್ಥೆ ಮೆಟಾ ದೊಡ್ಡ ಪ್ರಮಾಣದಲ್ಲಿ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಕೊನೆಯ ಹಂತದ ಪ್ರಕ್ರಿಯೆ ಆರಂಭಿಸಿದೆ.

ಎರಡನೇ ಮತ್ತು ಕೊನೆಯ ಹಂತದ ನೌಕರಿಯಿಂದ ವಜಾ ಪ್ರಕ್ರಿಯೆಯಲ್ಲಿ ಬರೋಬ್ಬರೀ 10 ಸಾವಿರ ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆ.

ಮೆಟಾ ಕಂಪನಿ ವಾಟ್ಸಾಪ್​, ಫೇಸ್​ಬುಕ್​, ಇನ್ಸಾಸ್ಟಾಗ್ರಾಂನಿಂದ ನೌಕರರನ್ನು ತೆಗೆದುಹಾಕಲಿದೆ.

ಕಳೆದ ವರ್ಷದ ನವೆಂಬರ್​ನಲ್ಲಿ ಮೆಟಾ 11 ಸಾವಿರ ಉದ್ಯೋಗಿಗಳನ್ನು ತೆಗೆದುಹಾಕಿತ್ತು.