ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ

ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು ನಿಧನರಾಗಿದ್ದಾರೆ.

ಸ್ವಾಮೀಜಿ ಅವರು ಇವತ್ತು ಬೆಳಗ್ಗೆ ಜಿನೈಕ್ಯರಾಗಿದ್ದಾರೆ. ಇವರಿಗೆ 73 ವರ್ಷ ವಯಸ್ಸಾಗಿತ್ತು.

ಇವರು ಶ್ರವಣಬೆಳಗೊಳದ ಮಠಾಧೀಪತಿಯಾಗಿ ಪೀಠವೇರಿ 53 ವರ್ಷವಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕು ಇವರ ತವರೂರು.

ಕಾರ್ಕಳ ತಾಲೂಕಿನ ವರಂಗದಲ್ಲಿ  ಮೇ 3, 1949ರಲ್ಲಿ ಜನಿಸಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಬಾಲ್ಯದ ಅಪರೂಪದ ಚಿತ್ರ. ಅಂದ ಹಾಗೆ ಶ್ರೀಗಳ ಪೂರ್ವಾಶ್ರಮದ ಹೆಸರು ರತ್ನವರ್ಮ.

ತನ್ನ 20 ನೇ ವಯಸ್ಸಿನಲ್ಲಿ 1969 ಡಿಸೆಂಬರ್‌ 12 ರಂದು ಸನ್ಯಾಸ ದೀಕ್ಷೆ  ಸ್ವೀಕರಿಸಿದ್ದರು.

1970 ಎಪ್ರಿಲ್‌ 19 ರಂದು ನೂತನ ಸ್ವಾಮೀಜಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಟ್ಟಾಭಿಷೇಕ ಸಂಭ್ರಮ ನಡೆಯಿತು.