ಯುವಕನ ನುಂಗಿದ ಶಾರ್ಕ್ ಮೀನು.. ಇಲ್ಲಿದೆ ಭಯಂಕರ ದೃಶ್ಯ

ಈಜಿಪ್ಟ್​​ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ರಷ್ಯಾದ ಯುವಕನನ್ನು ಶಾರ್ಕ್ ಮೀನು ನುಂಗಿದೆ. ಕೂಡಲೇ ಬೋಟ್​​ಗಳ ನೆರವಿನಿಂದ ನೀರಿಗೆ ಇಳಿದ ಸ್ಥಳೀಯರು ಶಾರ್ಕ್ ಮೀನನ್ನು ಹಿಡಿದರೂ ಪ್ರಯೋಜನವಾಗಿಲ್ಲ.

10 ಅಡಿ ಉದ್ದದ ಶಾರ್ಕ್ ಮೀನನ್ನು ದಡಕ್ಕೆ ತಂದು ಹೊಟ್ಟೆ ಸೀಳಿ ನೋಡಿದಾಗ ಅದರಲ್ಲಿ ಮೃತ ಯುವಕನ ಅವಯವಗಳು ಲಭ್ಯವಾಗಿವೆ.

ಈಜಿಪ್ಟ್​ ದೇಶದ ಹುರ್ಗಡಾ ನಗರದ ರೆಸಾರ್ಟ್​ ಒಂದರಲ್ಲಿ ಜೂನ್ 8ರಂದು ಈ ದಾರುಣ ಮತ್ತು ಭಯಾನಕ ಘಟನೆ ನಡೆದಿದೆ.

ಪೋಪೊವ್ ಎಂಬ ರಷ್ಯಾದ ಯುವಕ ಈಜಲೆಂದು ಸಮುದ್ರಕ್ಕೆ ಇಳಿದಿದ್ದ. ಆದರೆ, ಈ ಸಮಯದಲ್ಲಿ ತನ್ನ ಬಳಿ ಬಂದ ಶಾರ್ಕ್ ಮೀನನ್ನು ಗುರುತಿಸುವಲ್ಲಿ ವಿಫಲನಾದ..

ಸ್ಥಳೀಯರು ನೋಡ ನೋಡುತ್ತಿದ್ದಂತೆ ಆ ಶಾರ್ಕ್ ಮೀನು ಆ ಯುವಕನನ್ನು ನುಂಗಿ ನೀರು ಕುಡಿಯಿತು.ಕೂಡಲೇ ಬೋಟ್​​ಗಳ ನೆರವಿನಿಂದ ನೀರಿಗೆ ಇಳಿದ ಸ್ಥಳೀಯರು ರಕ್ಕಸ ಶಾರ್ಕ್ ಮೀನನ್ನು ಹಿಡಿದರೂ ಪ್ರಯೋಜನವಾಗಿಲ್ಲ.

ಅಷ್ಟೊತ್ತಿಗೆ ಯುವಕ ಪ್ರಾಣ ಕಳೆದುಕೊಂಡಿದ್ದ. ಶಾರ್ಕ್​ ಮೀನಿನ ಹೊಟ್ಟೆ ಸೀಳಿ ನೋಡಿದಾಗ ಆತನ ಶರೀರದ ಭಾಗಗಳು ಪತ್ತೆಯಾಗಿವೆ.

ರಷ್ಯಾಗೆ ಸೇರಿದ ಪೋಪೊವ್ 199ರಲ್ಲಿ ಜನಿಸಿದ್ದ. ಸದ್ಯ ಈಜಿಪ್ಟ್​ನಲ್ಲಿ ನೆಲೆಸಿದ್ದ.

ಈ ದಾರುಣ ಘಟನೆ ಹಿನ್ನೆಲೆಯಲ್ಲಿ ನೀರಿದ್ದ ಕಡೆ ಹೋದಾಗ ಎಚ್ಚರಿಕೆ ವಹಿಸಬೇಕು ಎಂದು ರಷ್ಯಾ ರಾಯಭಾರ ಕಚೇರಿ ತನ್ನ ಪ್ರಜೆಗಳನ್ನು ಎಚ್ಚರಿಸಿದೆ.

ಇದೇ ಸಂದರ್ಭದಲ್ಲಿ ರಕ್ಕಸ ಶಾರ್ಕ್ ಮೀನು ಈ ಹಿಂದೆ ಯಾರನ್ನಾದರೂ ಇದೇ ರೀತಿ ನುಂಗಿತ್ತಾ ಎಂಬುದರ ಬಗ್ಗೆ ಇದೀಗ ತನಿಖೆ ಶುರುವಾಗಿದೆ.