Bengaluru: ಬೆಂಗಳೂರಿನ ಮಾಲ್​​ನಲ್ಲಿ ಲೈಂಗಿಕ ಕಿರುಕುಳ – ಕಾಮುಕನ ಗುರುತು ಪತ್ತೆ

ಬೆಂಗಳೂರಿನ ಲುಲು ಮಾಲ್​​ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕಾಮುಕನ ಬಗ್ಗೆ ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ.

ಬಂಧಿತ ಕಾಮುಕನನ್ನು ಅಶ್ವತ್ಥ್​ ನಾರಾಯಣ್​ ಎಂದು ಗುರುತಿಸಲಾಗಿದೆ. ಈತ ಎಂಟು ತಿಂಗಳ ಹಿಂದೆಯಷ್ಟೇ ನಿವೃತ್ತನಾಗಿದ್ದ. 60 ವರ್ಷದ ಈತ ಪ್ರತಿಷ್ಠಿತ ಮಠವೊಂದಕ್ಕೆ ಸೇರಿದ ಶಾಲೆಯಲ್ಲಿ ಶಿಕ್ಷಕನಾಗಿದ್ದ. 

ಲುಲು ಮಾಲ್​ನಲ್ಲಿ ಯುವತಿಯನ್ನು ಅಸಭ್ಯವಾಗಿ ಮುಟ್ಟಿದ್ದ ಈತನ ಕೃತ್ಯವನ್ನು ಯಶವಂತ್​ ಎಂಬವರು ವೀಡಿಯೋ ರೆಕಾರ್ಡ್​ ಮಾಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು.

LEAVE A REPLY

Please enter your comment!
Please enter your name here