ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಪೋಕ್ಸೋ ಕಾಯ್ದೆಯಡಿ ಬಂಧನವಾಗಿರುವ ಮುರಾಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳ (Shivamoorthy Murugha Shree) ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿ ಗಂಗಾಧರಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ 5ನೇ ಆರೋಪಿಯಾಗಿರುವ ವಕೀಲ ಗಂಗಾಧರಯ್ಯ ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದ್ದು, ಚಿತ್ರದುರ್ಗದ ಡಿವೈಎಸ್ಪಿ ಕಚೇರಿಯಲ್ಲಿ ಗಂಗಾಧರಯ್ಯ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ : ಮುರುಘಾ ಶ್ರೀಗಳಿಗೆ ಎದೆ ನೋವಂತೆ..! ಶಿಫ್ಟ್ ಮಾಡಿದ್ದು ಆಂಬುಲೆನ್ಸ್ ನಲ್ಲಿ ಅಲ್ಲ.!
ಪ್ರಕರಣದ 3ನೇ ಆರೋಪಿಯಾಗಿರುವ ಮಠದ ಉತ್ತರಾಧಿಕಾರಿ ಬಸವಾಧಿತ್ಯ ಪೊಲೀಸರು ವಶಕ್ಮಕೆ ಪಡೆದುಕೊಂಡಿದ್ದಾರೆ. 4ನೇ ಆರೋಪಿಯಾಗಿರುವ ಪರಮಶಿವಯ್ಯ ಇದುವರೆಗೂ ಪೊಲೀಸರಿಗೆ ಸಿಕ್ಕಿಲ್ಲ. ಅವರ ಬಂಧನಕ್ಕಾಗಿ ಹುಡುಕಾಟ ಮುಂದುವರಿದಿದೆ.
ಮುರುಘಾಶ್ರೀ (Shivamoorthy Murugha Shree) ವಿರುದ್ಧ ಫೋಕ್ಸೋ ಪ್ರಕರಣದ 2ನೇ ಆರೋಪಿ ಲೇಡಿ ವಾರ್ಡನ್ ರಶ್ಮಿಯನ್ನು ವಿಚಾರಣೆಗಾಗಿ 7 ದಿನ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೇಳಿದ್ದಾರೆ. ಸದ್ಯ ಈಕೆ ಶಿವಮೊಗ್ಗ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ಈ ಸಂಬಂಧ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯದಿಂದ ಪೊಲೀಸರಿಗೆ ಸೂಚನೆ ಸಿಗುವ ಸಾಧ್ಯತೆಯಿದೆ. ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ : ಮುರುಘಾ ಮಠದ ಇತಿಹಾಸ ಮತ್ತು ಪರಂಪರೆ!